alex Certify ಫೋನ್​​ ಕಸಿದುಕೊಂಡ ತಂದೆ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫೋನ್​​ ಕಸಿದುಕೊಂಡ ತಂದೆ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಬಾಲಕಿ….!

ಸ್ಮಾರ್ಟ್​ಫೋನ್​​ ಅತಿಯಾಗಿ ಬಳಕೆ ಮಾಡದಂತೆ ತಂದೆ ತಾಕೀತು ಮಾಡಿದ್ದರಿಂದ ಮನನೊಂದ 7ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಮಂಗಳವಾರ ಬೆಂಕಿ ಹಚ್ಚಿಕೊಂಡಿದ್ದ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವಿದ್ಯಾರ್ಥಿನಿ ಗುರುವಾರ ಮೃತಪಟ್ಟಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದಿನಗೂಲಿ ನೌಕರರಾಗಿದ್ದ ಪೋಷಕರು ಮಗಳ ಆನ್​ಲೈನ್​ ತರಗತಿಗಾಗಿ ಸ್ಮಾರ್ಟ್​ಫೋನ್​ ಖರೀದಿ ಮಾಡಿದ್ದರು ಎನ್ನಲಾಗಿದೆ.

ಮಿಯಾಪುರದ ಹಫೀಜ್​​ಪೇಟೆ ನಿವಾಸಿಯಾಗಿದ್ದ 13 ವರ್ಷದ ಮೃತ ಬಾಲಕಿ ಕೇಸರಾದ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ತರಗತಿಗಳು ಆರಂಭವಾಗಿದ್ದರೂ ಸಹ ಮನೆಯಲ್ಲೇ ಇದ್ದ ಬಾಲಕಿ ಆನ್​ಲೈನ್​ ಕ್ಲಾಸ್​​ ಗೆ ಹಾಜರಾಗುತ್ತಿದ್ದಳು.

ತರಗತಿ ಮುಗಿದ ಬಳಿಕ ಬಾಲಕಿಯು ಮೊಬೈಲ್ ಫೋನ್​ನಿಂದ ಸಂಬಂಧಿಗಳು ಹಾಗೂ ಸ್ನೇಹಿತರ ಜೊತೆ ಮಾತನಾಡುತ್ತಿದ್ದಳು. ಆಕೆಗಿಂತ ವಯಸ್ಸಿನಲ್ಲಿ ತುಂಬಾ ದೊಡ್ಡವನಾದ ಪುರುಷ ಸಂಬಂಧಿಯೊಡನೆ ಮಗಳು ಅತಿಯಾಗಿ ಮಾತನಾಡುವುದನ್ನು ಗಮನಿಸಿದ ತಂದೆ ಎಚ್ಚರಿಕೆ ನೀಡಿದ್ದ ಎನ್ನಲಾಗಿದೆ. ಆದರೆ ತಂದೆ ಮಾತನ್ನು ಕೇಳಲು ಮಗಳು ಒಪ್ಪದ ಕಾರಣ ಆಕೆಯ ಮೊಬೈಲ್​ ಫೋನ್​ ಕಸಿದಿದ್ದ ತಂದೆ ಸಿಮ್​ ಕಾರ್ಡ್​ನ್ನು ಬದಲಾಯಿಸಿದ್ದ ಎನ್ನಲಾಗಿದೆ.

ಅಲ್ಲದೇ ಪುತ್ರಿಯ ಈ ನಡವಳಿಕೆ ಬಗ್ಗೆ ಗಮನ ಹರಿಸದೇ ಇದ್ದುದಕ್ಕೆ ಪತ್ನಿಗೆ ಕೂಡ ನಿಂದಿಸಿದ್ದರು ಎನ್ನಲಾಗಿದೆ. ಈ ಎಲ್ಲಾ ಘಟನೆಗಳಿಂದ ಮನನೊಂದಿದ್ದ ಬಾಲಕಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಬಾಲಕಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ಶುಕ್ರವಾರ ಸಾವನ್ನಪ್ಪಿದ್ದಾಳೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...