ಸೇಬು, ಚಾಕ್ಲೆಟ್, ಅನಾನಸ್‌ಗಳಲ್ಲೂ ಬಜ್ಜಿ; ಫೇಮಸ್ ಆಗಿದೆ ಈ ಫುಡ್ ಜಾಯಿಂಟ್ 30-04-2023 7:04AM IST / No Comments / Posted In: India, Featured News, Live News, Recipies, Life Style ಹೈದರಾಬಾದ್‌ನ ಹೈಟೆಕ್ ಸಿಟಿ ಮೆಟ್ರೋ ನಿಲ್ದಾಣದ ಬಳಿ ಇರುವ ರಾಜಮಂಡ್ರಿ ಶ್ರೀನಿವಾಸ ಮಿಕ್ಚರ್ ಪಾಯಿಂಟ್ ತನ್ನ ವಿಶಿಷ್ಟ ಖಾದ್ಯಗಳಿಂದ ಜನಪ್ರಿಯತೆ ಗಿಟ್ಟಿಸಿಕೊಂಡಿದೆ. ಬಗೆ ಬಗೆಯ ಬಜ್ಜಿ ಮಿಕ್ಚರ್‌ಗಳು – ಬಾಳೇಕಾಯಿ, ಮೆಣಸಿನಕಾಯಿ, ಆಲೂಗೆಡ್ಡೆ, ಇಲ್ಲಿನ ವಿಶೇಷತೆಗಳಾಗಿವೆ. ಇದೇ ವೇಳೆ, ಕಡಲೇಹಿಟ್ಟಿನೊಳಗೆ ನಾವು ಊಹಿಸಿಯೂ ಇಲ್ಲದ ಪದಾರ್ಥಗಳನ್ನು ಹಾಕಿ ಬಜ್ಜೆ ಮಾಡುವಲ್ಲಿ ಈ ಜಾಗ ಖ್ಯಾತಿ ಪಡೆದಿದೆ. ಪೈನಾಪಲ್, ಸೇಬು, ಚಾಕಲೇಟ್‌ಗಳನ್ನೂ ಸಹ ಬಜ್ಜಿ ಮಾಡುವ ಈ ಜಾಗವು ಮಧ್ಯಾಹ್ನ 12 ಗಂಟೆಗೆ ತೆರೆಯಲಿದ್ದು, ರಾತ್ರಿ 11 ಗಂಟೆವರೆಗೂ ತನ್ನ ವೈವಿಧ್ಯಮಯ ಬಜ್ಜಿ ಮಿಕ್ಚರ್‌ಗಳನ್ನು ಗ್ರಾಹಕರಿಗೆ ಉಣಬಡಿಸುತ್ತದೆ. ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ 2009ರಲ್ಲಿ ಆರಂಭಗೊಂಡ ಶ್ರೀನಿವಾಸ ಮಿಕ್ಚರ್ ಪಾಯಿಂಟ್ ಬಲು ಬೇಗ ಖ್ಯಾತಿ ಪಡೆದಿದ್ದು, ಇದೀಗ ಹೈದರಾಬಾದ್‌ನಲ್ಲೂ ಶಾಖೆ ಹೊಂದಿದೆ. 15 ಬಗೆಯ ಭಜ್ಜಿಗಳ ಮೆನುವಿನೊಂದಿಗೆ – ಕ್ಯಾರೆಟ್, ಬದನೇಕಾಯಿ, ಟೊಮ್ಯಾಟೋ, ಮೊಟ್ಟೆ, ಗೋಡಂಬಿ, ಪನೀರ್, ಕೇಕ್ ಹಾಗೂ ಮಾವಿನ ಹಣ್ಣು ಸೇರಿದಂತೆ, ಈ ಜಾಗವು ತಿಂಡಿ ಪೋತರಿಗೆ ಭಾರೀ ಆಸಕ್ತಿಯ ತಾಣವಾಗಿದೆ. ಡೈರಿ ಮಿಲ್ಕ್ ಚಾಕ್ಲೇಟ್‌ಗಳನ್ನು ಬಳಸಿಕೊಂಡು ಬಜ್ಜಿ ಮಾಡುವುದು ಇಲ್ಲಿನ ವಿಶೇಷತೆಗಳಲ್ಲಿ ಒಂದಾಗಿದೆ. ಏನಪ್ಪಾ ಇದು ಬಾಕ್ಲೇಟ್ ಬಜ್ಜಿ ಎಂದು ನೀವು ಮೂಗು ಮುರಿಯಬಹುದು. ಆದರೆ ಇದೇ ಚಾಕ್ಲೆಟ್ ಬಜ್ಜಿಗೆ ಯುವ ಸಮುದಾಯ ಭಾರೀ ಕ್ರೇಜ಼್ ಬೆಳೆಸಿಕೊಂಡಿದೆ.