alex Certify ಲಿಂಗ ಪರಿವರ್ತನೆ ಮಾಡಿಸಿಕೊಂಡ IRS ಅಧಿಕಾರಿ; ಬದಲಾವಣೆಗೆ ಕೇಂದ್ರ ಸರ್ಕಾರದಿಂದ ಅನುಮತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಿಂಗ ಪರಿವರ್ತನೆ ಮಾಡಿಸಿಕೊಂಡ IRS ಅಧಿಕಾರಿ; ಬದಲಾವಣೆಗೆ ಕೇಂದ್ರ ಸರ್ಕಾರದಿಂದ ಅನುಮತಿ

ಇದೇ ಮೊದಲ ಬಾರಿ ಅಧಿಕಾರಿಯೊಬ್ಬರ ಲಿಂಗ ಬದಲಾವಣೆ ನಡೆದಿದ್ದು, ಅವರ ಹೆಸರನ್ನು ಮಹಿಳೆಯಿಂದ ಪುರುಷ ಲಿಂಗಕ್ಕೆ ಬದಲಿಸಲಾಗಿದೆ. ಕೇಂದ್ರೀಯ ಅಬಕಾರಿ ಸೇವಾ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ,  ಹೈದರಾಬಾದ್‌ ಶಾಖೆಯಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡ ಮಹಿಳಾ ಭಾರತೀಯ ಕಂದಾಯ ಸೇವೆ ಅಧಿಕಾರಿಯನ್ನು ಅಧಿಕೃತವಾಗಿ ಪುರುಷ ಎಂದು ಗುರುತಿಸಲಾಗಿದೆ.

ಹೈದರಾಬಾದ್‌ನ CESTAT ನಲ್ಲಿ ಜಂಟಿ ಆಯುಕ್ತರಾಗಿ ನೇಮಕಗೊಂಡ 2013 ರ ಬ್ಯಾಚ್‌ನ ಐಆರ್‌ ಎಸ್‌ ಅಧಿಕಾರಿ ಮಿಸ್‌ ಎಂ ಅನಸೂಯಾ ಅವರು ಅನಸೂಯಾ ಹೆಸರನ್ನು ಎಂ ಅನುಕತಿರ್ ಸೂರ್ಯ ಎಂದು ಬದಲಿಸಿಕೊಂಡಿದ್ದಾರೆ. ಅಲ್ಲದೆ ಅವರು ತಮ್ಮ ಲಿಂಗವನ್ನು ಬದಲಿಸುವಂತೆ ವಿನಂತಿ ಮಾಡಿದ್ದರು. ಎಂ ಅನುಸೂಯಾ ಅವರ ಮನವಿಯನ್ನು ಪರಿಗಣಿಸಲಾಗಿದೆ. ಇನ್ನು ಮುಂದೆ, ಅಧಿಕಾರಿಯನ್ನು ಎಲ್ಲಾ ಅಧಿಕೃತ ದಾಖಲೆಗಳಲ್ಲಿ ಶ್ರೀ ಎಂ ಅನುಕತಿರ್ ಸೂರ್ಯ ಎಂದು ಗುರುತಿಸಲಾಗುತ್ತದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್, ಕಂದಾಯ ಇಲಾಖೆ ತಿಳಿಸಿದೆ.

ಭಾರತೀಯ ನಾಗರಿಕ ಸೇವೆಗಳಲ್ಲಿ ಇಂತಹ ಬದಲಾವಣೆ ಮಾಡಿರುವುದು ಇದೇ ಮೊದಲು. ಅನುಕತಿರ್ ಅವರು ಚೆನ್ನೈನಲ್ಲಿರುವ ಸೆಂಟ್ರಲ್ ಬೋರ್ಡ್ ಆಫ್ ಸಿ & ಐಟಿಯಲ್ಲಿ ಸಹಾಯಕ ಆಯುಕ್ತರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅವರು 2018 ರಲ್ಲಿ ಡೆಪ್ಯೂಟಿ ಕಮಿಷನರ್ ಆಗಿ ಬಡ್ತಿ ಪಡೆದ್ದರು. ಅವರು 2023 ರಲ್ಲಿ ಹೈದರಾಬಾದ್‌ನಲ್ಲಿ CESTAT ಗೆ ಸೇರಿದ್ದರು.

ಅನುಕತಿರ್ ಮೂಲತಃ ತಮಿಳುನಾಡಿನವರು. ಮದ್ರಾಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನದಲ್ಲಿ ಪದವಿ ಪಡೆದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...