ನವದೆಹಲಿ: ಈ ಚಳಿಗಾಲವು ದೆಹಲಿಯವರಿಗೆ ಸಾಕಷ್ಟು ಕಠಿಣವಾಗಿದೆ. ಏಕೆಂದರೆ ನಿರಂತರ ಶೀತ ಅಲೆ ಉಂಟಾಗಿದೆ. ಮತ್ತು ಪಾದರಸವು 2 ಡಿಗ್ರಿಗಿಂತ ಕಡಿಮೆಯಾಗಿದೆ. ಕಳೆದ ಸೋಮವಾರ ನಸುಕಿನ ವೇಳೆಯಲ್ಲಿ ಪಾದರಸವು 1.4 ° C ಗೆ ಇಳಿಯುವುದರೊಂದಿಗೆ ದೆಹಲಿಯು ಈ ಋತುವಿನ ಅತ್ಯಂತ ಕಡಿಮೆ ತಾಪಮಾನವನ್ನು ದಾಖಲಿಸಿದೆ.
ರಾಜಧಾನಿಯು ಈಗ ಯಾವುದೇ ಗಿರಿಧಾಮಕ್ಕಿಂತ ಕಮ್ಮಿ ಇಲ್ಲ ಎಂದು ಕೆಲವರು ಹೇಳುತ್ತಿದ್ದರೆ, ಇತರರು ತಮ್ಮ ಕಂಬಳಿಯಿಂದ ಹೊರಬರಲು ಮತ್ತು ತಮ್ಮ ದೈನಂದಿನ ಕೆಲಸಗಳನ್ನು ಮಾಡಲು ಕಷ್ಟಪಡುತ್ತಿದ್ದಾರೆ. ಈಗ, ಹೈದರಾಬಾದಿನ ಕಲಾವಿದ ಅನುಜ್ ಗುರ್ವಾರಾ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ಪರಿಸ್ಥಿತಿಯನ್ನು ತೋರಿಸುವ ಚಿತ್ರಣ ಸೆರೆಯಾಗಿದೆ.
ದೆಹಲಿಯವರು ಒಂದೋ ಮಾಲಿನ್ಯಕ್ಕಾಗಿ ಏರ್ ಪ್ಯೂರಿಫೈಯರ್‌ಗಳನ್ನು ಇರಿಸಿಕೊಳ್ಳಬೇಕು ಅಥವಾ ಕೊರೆಯುವ ಚಳಿಯ ವಿರುದ್ಧ ಹೋರಾಡಲು ಹೀಟರ್ ಅನ್ನು ಇರಿಸಬೇಕಾಗುತ್ತದೆ ಎಂದು ಅನುಜ್ ತಮಾಷೆ ಮಾಡಿದ್ದಾರೆ. ನಂತರ ಅವರು ಹೈದರಾಬಾದ್‌ನ ಹವಾಮಾನವನ್ನು ಹೋಲಿಸಿದ್ದಾರೆ. ವಿಡಿಯೋ ಈಗಾಗಲೇ 25 ಸಾವಿರ ವೀಕ್ಷಣೆಗಳು ಮತ್ತು ಟನ್‌ಗಳಷ್ಟು ಪ್ರತಿಕ್ರಿಯೆಗಳನ್ನು ಗಳಿಸಿದೆ.
ಇಂದಿನಿಂದ ಮುಂದಿನ ಆರು ದಿನಗಳ ಕಾಲ ದೆಹಲಿಯಲ್ಲಿ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಯೆಲ್ಲೋ ಅಲರ್ಟ್ ಘೋಷಿಸಿದೆ.