alex Certify ಸಿಸಿ ಕ್ಯಾಮೆರಾದಲ್ಲಿ ಬಯಲಾಯ್ತು ರಹಸ್ಯ: ಸರ್ಕಾರಿ ಆಸ್ಪತ್ರೆಯಲ್ಲಿದ್ದ 500 ಕೋವಿಶೀಲ್ಡ್ ಲಸಿಕೆ ಬಾಟಲ್ ನಾಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಸಿ ಕ್ಯಾಮೆರಾದಲ್ಲಿ ಬಯಲಾಯ್ತು ರಹಸ್ಯ: ಸರ್ಕಾರಿ ಆಸ್ಪತ್ರೆಯಲ್ಲಿದ್ದ 500 ಕೋವಿಶೀಲ್ಡ್ ಲಸಿಕೆ ಬಾಟಲ್ ನಾಪತ್ತೆ

ಹೈದರಾಬಾದ್: ಹೈದರಾಬಾದ್ ಸರ್ಕಾರಿ ಆಸ್ಪತ್ರೆಯಿಂದ 500 ಕೋವಿಶೀಲಡ್ ಲಸಿಕೆ ಬಾಟಲಿಗಳು ಕಾಣೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

500 ಕೋವಿಶೀಲ್ಡ್ ಲಸಿಕೆ ಬಾಟಲಿಗಳು ಇದ್ದ 50 ಬಾಕ್ಸ್ ನಾಪತ್ತೆಯಾಗಿದ್ದು ಕೊಂಡಾಪುರ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ದೂರು ನೀಡಿದ್ದಾರೆ. ಮೇ 19 ರಂದು ಸ್ಟಾಕ್ ಪರಿಶೀಲಿಸುವಂತೆ ತಮ್ಮ ಸಹೋದ್ಯೋಗಿಗೆ ಅಧೀಕ್ಷಕರು ತಿಳಿಸಿದ ಸಂದರ್ಭದಲ್ಲಿ 500 ಬಾಟಲ್ ಕೋವಿಶೀಲ್ಡ್ ಲಸಿಕೆ ನಾಪತ್ತೆಯಾಗಿರುವುದು ಕಂಡುಬಂದಿದೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಸ್ಪತ್ರೆಯ ಸಿಬ್ಬಂದಿಯೊಬ್ಬರು ರೆಫ್ರಿಜಿರೇಟೆಡ್ ರೂಮ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಬಂದಿದೆ. ಇದರ ಆಧಾರದಲ್ಲಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...