
ಕೋವಿಡ್ ಸಾಂಕ್ರಮಿಕದ ಕಾರಣದಿಂದ ಲಾಕ್‌ಡೌನ್ ಮೇಲೆ ಲಾಕ್‌ಡೌನ್ ಆಗಿ ಚಟುವಟಿಕೆಗಳನ್ನೇ ಕಾಣದೇ ಆರ್ಥಿಕ ಮುಗ್ಗಟ್ಟಿಗೆ ಸಿಲುಕಿರುವ ಮುಂಬೈನ ಹಯಾತ್ ರಿಜೆನ್ಸಿ ಹೊಟೇಲ್ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
“ಏಷ್ಯನ್ ಹೋಟೆಲ್ಸ್ (ಪಶ್ಚಿಮ) ಲಿ.ನಿಂದ ದುಡ್ಡು ಬರದೇ ಇರುವ ಕಾರಣ, ಹಯಾತ್ ರಿಜೆನ್ಸಿ ಹೊಟೇಲ್ ಮುಂಬಯಿಯ ಮಾಲೀಕರಿಗೆ ವೇತನಗಳನ್ನು ಪಾವತಿ ಮಾಡಲಾಗದೇ ಹಾಗೂ ಕಾರ್ಯಚಟುವಟಿಕೆಗಳನ್ನು ನಡೆಸಲು ಆಗದೇ ಇರುವ ಕಾರಣದಿಂದ, ಹೊಟೇಲ್‌ನ ಎಲ್ಲಾ ಸಿಬ್ಬಂದಿಗೆ ಈ ವಿಷಯ ತಿಳಿಸುತ್ತಿದ್ದೇವೆ” ಎಂದು ಹೊಟೇಲ್‌ನ ಜನರಲ್ ಮ್ಯಾನೇಜರ್ ಹರ್ದೀಪ್ ಮರ್ವಾ ತಿಳಿಸಿದ್ದಾರೆ.
ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಮೂವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಮುಂಬೈ ವಿಮಾನ ನಿಲ್ದಾಣದಿಂದ ಕೆಲವೇ ನಿಮಿಷಗಳ ಡ್ರೈವ್ ಅಂತರದಲ್ಲಿರುವ ಹಯಾತ್ ರಿಜೆನ್ಸಿ ಮಾಯಾನಗರಿಯ ಐದು ಅಗ್ರ ಹೊಟೇಲ್‌ಗಳಲ್ಲಿ ಒಂದಾಗಿದೆ.