ನಾವು ಸಿಂಕನ್ನು ಕೈ ತೊಳೆಯಲು, ಪಾತ್ರೆ ತೊಳೆಯಲು ಬಳಸುತ್ತೇವೆ. ಆದರೆ ಅದರ ವಿನ್ಯಾಸವನ್ನು ಸರಿಯಾಗಿ ಗಮನಿಸುವುದಿಲ್ಲ. ಸಾಮಾನ್ಯವಾಗಿ ಸ್ನಾನ ಗೃಹದ ಬೇಸಿನ್ ಹಾಗೂ ಅಡುಗೆ ಮನೆಯ ಬೇಸಿನ್ ಭಿನ್ನವಾಗಿರುತ್ತದೆ. ಸ್ನಾನ ಗೃಹದ ಬೇಸಿನ್ ಟ್ಯಾಪ್ ಅಡಿಯಲ್ಲಿ, ಸಿಂಕ್‌ನ ಮೇಲ್ಭಾಗದಲ್ಲಿ ಸಣ್ಣ ರಂಧ್ರ ಇರುತ್ತದೆ. ಆದ್ರೆ ಅಡುಗೆ ಮನೆಯ ಸಿಂಕ್‌ನಲ್ಲಿ ಇದಿರುವುದಿಲ್ಲ. ಯಾಕೆ ಹೀಗೆ ವಿನ್ಯಾಸ ಮಾಡಿರಲಾಗುತ್ತದೆ ಎಂಬುದು ನಿಮಗೆ ಗೊತ್ತಾ ?
ಮೊದಲೇ ಹೇಳಿದಂತೆ ಬಾತ್ರೂಮ್ ಸಿಂಕ್ ಮತ್ತು ಕಿಚನ್ ಸಿಂಕ್ ವಿನ್ಯಾಸ ಪರಸ್ಪರ ಭಿನ್ನವಾಗಿದೆ. ಈ ಎರಡರ ನಡುವೆ ದೊಡ್ಡ ವ್ಯತ್ಯಾಸವೆಂದರೆ ಸಣ್ಣ ರಂಧ್ರ. ಬಾತ್ ರೂಮಿನ ಸಿಂಕ್ ನಲ್ಲಿ ಡ್ರೈನ್‌ನ ದೊಡ್ಡ ರಂಧ್ರದ ಜೊತೆ ಸಣ್ಣ ರಂಧ್ರವಿರುತ್ತದೆ. ಸಿಂಕ್‌ನಲ್ಲಿರುವ ಹೆಚ್ಚುವರಿ ನೀರು ತೆಗೆಯುವ ಕೆಲಸವನ್ನು ಈ ರಂಧ್ರ ಮಾಡುತ್ತದೆ.
ಸ್ನಾನಗೃಹದ ಸಿಂಕ್‌ನಲ್ಲಿರುವ ರಂಧ್ರವನ್ನು ಓವರ್‌ಫ್ಲೋ ಹೋಲ್ ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಡ್ರೈನ್ ಹೋಲ್‌ನಲ್ಲಿ ಕಸ ಸಿಕ್ಕಿಕೊಂಡಾಗ, ನೀರು ಸಿಂಕ್ ತುಂಬುತ್ತದೆ. ಈ ಸಣ್ಣ ರಂಧ್ರವಿದ್ರೆ ನೀರು ನಿಧಾನವಾಗಿ ಹೊರಬರುತ್ತದೆ. ಗುಂಡಿಗೆ ನೀರು ಬರ್ತಿದ್ದಂತೆ ನೀರು ಅದ್ರ ಮೂಲಕ ಹೋಗುತ್ತದೆ. ಸಿಂಕ್ ತುಂಬಿ ಹೊರಗೆ ಹರಿಯಲು ಬಿಡುವುದಿಲ್ಲ.