
ಕೇರಳದ ಪಾಲಕ್ಕಾಡಿನ ಪಾಲ ಪೂವಕುಳಂ ಎಂಬ ಊರಿನ 22 ವರ್ಷದ ಗೃಹಿಣಿಯೊಬ್ಬರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋಗಿದ್ದು, ಇಲ್ಲಿನ ರಾಮಾಪುರಂ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ.
ತನ್ನ ಪತಿ ವಿಪರೀತ ಪಾನ್ ಪರಾಗ್ ಹಾಗೂ ಮದ್ಯ ಸೇವನೆ ಮಾಡುತ್ತಿದ್ದ ಕಾರಣ ಆತನೊಂದಿಗೆ ಬಾಳ್ವೆ ಮಾಡುವುದು ಕಷ್ಟವಾದ ಕಾರಣ ತಾನು ಹೀಗೆ ಓಡಿಹೋಗಿದ್ದಾಗಿ ಹೇಳಿಕೆ ಕೊಟ್ಟಿರುವ ಈ ಮಹಿಳೆ, ತಮ್ಮ ಕಥೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ವಿಡಿಯೋ ಕಾನ್ಫರೆನ್ಸ್ ಮುಖಾಂತರ ಪ್ರಸ್ತುತಪಡಿಸಿದ್ದಾರೆ.
ಪಾಲಕ್ಕಾಡ್‌ನ ಮನ್ನಾಡ್‌ಕಾಡ್‌ನ ನಿವಾಸಿಯೊಬ್ಬರೊಂದಿಗೆ ಸಾಮಾಜಿಕ ಜಾಲತಾಣದ ಮುಖಾಂತರ ಒಡನಾಟ ಬೆಳೆಸಿಕೊಂಡ ಈ ಮಹಿಳೆ ಈ ಪ್ಲಾನ್ ಅನ್ನು ಬಹಳ ದಿನಗಳಿಂದ ಮಾಡುತ್ತಾ ಬಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತಿಯೊಂದಿಗೆ ಬೆಳಿಗ್ಗೆ 4 ಗಂಟೆವರೆಗೂ ಮಲಗಿದ್ದ ಈಕೆ ಶೌಚಾಲಯಕ್ಕೆ ಹೋಗುವಂತೆ ಎದ್ದು, ಮನೆ ಬಳಿ ಕಾಯುತ್ತಿದ್ದ ತನ್ನ ಪ್ರಿಯಕರನೊಂದಿಗೆ ಓಡಿಹೋಗಿದ್ದಾರೆ.
ಕನ್ನಡಿಗ ಶ್ರೀನಿವಾಸ್ ಕೊರೋನಾ ಸೇವೆ ಕೊಂಡಾಡಿದ ಸೋನಿಯಾ ಗಾಂಧಿ
ಇದಕ್ಕೂ ಮುನ್ನ, ತನ್ನ ಮಡದಿಗೆ ಬೇರೊಬ್ಬನೊಂದಿಗೆ ಅನೈತಿಕ ಸಂಬಂಧವಿದೆ ಎಂದು ಪತ್ತೆ ಮಾಡಿಕೊಂಡಿದ್ದ ಪತಿ, ತನ್ನ ಮಡದಿಯ ಫೋನ್ ಕಸಿದುಕೊಂಡು ಆಕೆಯ ಸಿಮ್ ನಾಶ ಮಾಡಿದ್ದ. ಪ್ರಿಯಕರನೊಂದಿಗೆ ಓಡಿಹೋಗುವ ವೇಳೆ ಈಕೆ ತನ್ನ ಪತಿಯ ಫೋನ್ ಹಾಗೂ ಸಿಮ್ ತೆಗೆದುಕೊಂಡು ಹೋಗಿದ್ದಾಳೆ.
ತನ್ನ ಮಡದಿ ಕಾಣೆಯಾಗಿದ್ದಾಳೆ ಎಂದು ಅರಿತ ಕೂಡಲೇ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾನೆ ಪತಿ. ಆತನ ಮೊಬೈಲ್ ಫೋನ್ ಅನ್ನು ಟ್ರೇಸ್ ಮಾಡಿದ ಪೊಲೀಸರು ಆತನ ಮಡದಿ ಹಾಗೂ ಆಕೆಯ ಪ್ರಿಯಕರ ಎಲ್ಲಿದ್ದಾರೆ ಎಂದು ಪತ್ತೆ ಮಾಡಿದ್ದಾರೆ. ಪೊಲೀಸರು ತಮ್ಮನ್ನು ಬಂಧಿಸಬಹುದು ಎಂಬ ಕಾರಣಕ್ಕೆ ನೇರವಾಗಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾಗುವುದಾಗಿ ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ತಿಳಿಸಿದ್ದಾರೆ.
ಸಾಲಗಾರರ ಅನುಮತಿ ಪಡೆಯದೆ ಗೃಹ ಸಾಲದ ಮೇಲಿನ ಬಡ್ಡಿದರವನ್ನು ಬದಲಿಸುವಂತಿಲ್ಲ ಬ್ಯಾಂಕ್…! ಗ್ರಾಹಕ ಆಯೋಗದ ಮಹತ್ವದ ಆದೇಶ
ತನ್ನ ಪ್ರಿಯಕರನೊಂದಿಗೆ ದೇವಸ್ಥಾನವೊಂದರಲ್ಲಿ ಮದುವೆ ಮಾಡಿಕೊಂಡಿರುವುದಾಗಿಯೂ ಆತನೊಂದಿಗೆ ತನ್ನ ಮುಂದಿನ ಜೀವನ ನಡೆಸಲು ಇಚ್ಛಿಸುವುದಾಗಿಯೂ ಹೇಳಿಕೆ ಕೊಟ್ಟ ಬಳಿಕ ಈ ಮಹಿಳೆಗೆ ತನ್ನ ಪ್ರಿಯಕರನೊಂದಿಗೆ ಜೀವನ ಮಾಡಲು ಕೋರ್ಟ್ ಅನುಮತಿ ಕೊಟ್ಟಿದೆ. ಇದಾದ ಬಳಿಕ ಆಕೆಯ ಮಾಜಿ ಪತಿ ನಿರಾಸೆಯಿಂದ ಮನೆಗೆ ಬಂದಿದ್ದಾನೆ.