alex Certify ಪತ್ನಿಯ ಬೇಡಿಕೆ ಕೇಳಿ ಬೆಚ್ಚಿಬಿದ್ದ ಪತಿರಾಯ, ರೋಸಿ ಹೋಗಿ ಪೊಲೀಸರಿಗೆ ದೂರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪತ್ನಿಯ ಬೇಡಿಕೆ ಕೇಳಿ ಬೆಚ್ಚಿಬಿದ್ದ ಪತಿರಾಯ, ರೋಸಿ ಹೋಗಿ ಪೊಲೀಸರಿಗೆ ದೂರು

ಬೆಂಗಳೂರು: ಪತ್ನಿಯ ಕಾಟದಿಂದ ರೋಸಿಹೋದ ಪತಿರಾಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬೆಂಗಳೂರಿನ ಬಾಣಸವಾಡಿಯಲ್ಲಿ ಘಟನೆ ನಡೆದಿದೆ.

ಅಮಿತ್ ದೂರು ನೀಡಿದ ವ್ಯಕ್ತಿ ಎನ್ನಲಾಗಿದೆ. 2018 ರಲ್ಲಿ ಇಶಾ ಜೊತೆಗೆ ಅಮಿತ್ ಮದುವೆಯಾಗಿದ್ದು, ಮದುವೆಯಾದ ಕೆಲ ದಿನಗಳಲ್ಲೇ ಇಶಾ ತನ್ನ ಗಂಡನ ಬಳಿ ಚಿನ್ನಾಭರಣ ಕೊಡಿಸುವಂತೆ ಬೇಡಿಕೆ ಇಟ್ಟಿದ್ದಳು. ಇದಕ್ಕೆ ಒಪ್ಪದಿದ್ದಾಗ ಹಲ್ಲೆ ನಡೆಸಿ ಜಗಳವಾಡುತ್ತಿದ್ದಳು. ಪತ್ನಿಯ ಕಾಟದಿಂದ ರೋಸಿಹೋದ ಅಮಿತ್ ಹೇಳಿದಂತೆಯೇ ಕೇಳುತ್ತಿದ್ದ. ಇತ್ತೀಚೆಗೆ ಒಂದು ಕೋಟಿ ನೀಡುವಂತೆ ಡಿಮಾಂಡ್ ಮಾಡಿದ ಇಶಾ ಹಣ ಕೊಡದಿದ್ದರೆ, ವರದಕ್ಷಿಣೆ ಕಿರುಕುಳ ಕೇಸು ದಾಖಲಿಸುವುದಾಗಿ ಬೆದರಿಸಿದ್ದಾಳೆ. ಅಲ್ಲದೇ, ಈ ಹಿಂದೆಯೇ ಆಕೆಗೆ ಮೂರು ಮದುವೆಯಾಗಿ ವಂಚಿಸಿದ್ದಾರೆ ಎಂದು ಅಮಿತ್ ಬಾಣಸವಾಡಿ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...