ಬೆಂಗಳೂರು: ಲೈಂಗಿಕ ಕ್ರಿಯೆಯ ವೇಳೆ ಪತಿ ವಿಚಿತ್ರವಾಗಿ ಮತ್ತು ಕ್ರೂರವಾಗಿ ವರ್ತಿಸುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
21 ವರ್ಷದ ಮಹಿಳೆ ಕಾಡುಗೊಂಡನಹಳ್ಳಿ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಆಕೆಯ ಪತಿ ದೇವರಾಜ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ದಂಪತಿಗೆ ಮದುವೆಯಾಗಿದ್ದು, ಫಸ್ಟ್ ನೈಟ್ ನಿಂದಲೂ ದೇವರಾಜು ಲೈಂಗಿಕ ಕ್ರಿಯೆ ನಡೆಸುವಾಗ ವಿಚಿತ್ರ ಮತ್ತು ಕ್ರೂರವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಈ ರೀತಿಯ ವಿಚಿತ್ರ ವರ್ತನೆಯಿಂದ ಕಿರಿಕಿರಿಯಾಗುತ್ತಿರುವುದಾಗಿ ಮಹಿಳೆ ಹೇಳಿದರೂ ಆತ ಬಿಡುತ್ತಿರಲಿಲ್ಲ. ಅಲ್ಲದೆ ಹುಷಾರಿಲ್ಲದ ಸಂದರ್ಭದಲ್ಲಿಯೂ ಲೈಂಗಿಕಕ್ರಿಯೆಗೆ ಬಲವಂತ ಮಾಡಿ ಒಪ್ಪದಿದ್ದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಥಳಿಸುತ್ತಿದ್ದ.
ಸೆಕ್ಸ್ ವೇಳೆ ವಿಚಿತ್ರವಾಗಿ ವರ್ತಿಸುತ್ತಿದ್ದ ಆತನ ಬಗ್ಗೆ ಗಂಡನ ಮನೆಯವರು ಮತ್ತು ಪತಿ ಮನೆಯವರ ಗಮನಕ್ಕೆ ತಂದಾಗ ಬುದ್ಧಿವಾದ ಹೇಳಿದ್ದರು. ಇನ್ನು ಮುಂದೆ ಆ ರೀತಿ ಮಾಡುವುದಿಲ್ಲ ಎಂದಿದ್ದ ಆರೋಪಿ ಮತ್ತೆ ವಿಚಿತ್ರವಾಗಿ ಲೈಂಗಿಕ ತೊಂದರೆ ಕೊಡುತ್ತಿರುವುದಾಗಿ ಮಹಿಳೆ ದೂರು ನೀಡಿದ್ದಾರೆನ್ನಲಾಗಿದೆ.