
ಬೆಂಗಳೂರು: ಪತ್ನಿ ಕಿರುಕುಳದಿಂದ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಬೆನ್ನಲ್ಲೇ ವರದಕ್ಷಿಣೆ ಕಿರುಕುಳದ ಬಗ್ಗೆ ಸಾಕಷ್ಟು ಚರ್ಚೆಗಳು ಆರಂಭವಾಗಿವೆ. ಈ ನಡುವೆ ಪತ್ನಿ ಕಾಟಕ್ಕೆ ಬೇಸತ್ತು ಹೆಡ್ ಕಾನ್ಸ್ ಟೇಬಲ್ ಓರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದ್ದು, ಈ ಘಟನೆ ಬೆನ್ನಲ್ಲೇ ಬೆಂಗಳೂರಿನಲ್ಲಿ ಪತ್ನಿ ಕಿರುಕುಳಕ್ಕೆ ಬೇಸತ್ತಿ ಮತ್ತೋರ್ವ ವ್ಯಕಿ ಸಾವಿಗೆ ಶರಣಾಗಿದ್ದಾನೆ.
ಬೆಂಗಳೂರಿನ ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯ ಸಿಲುವೆಪುರದಲ್ಲಿ ಪತ್ನಿ ಕಿರುಕುಳ, ಅಕ್ರಮ ಸಂಬಂಧಕ್ಕೆ ಬೇಸತ್ತು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಬಾಲರಾಜ್ ಆತ್ಮಹತ್ಯೆಗೆ ಶರಣಾಗಿರುವ ವ್ಯಕ್ತಿ. 18 ವರ್ಷಗಳ ಹಿಂದೆ ಕುಮಾರಿ ಎಂಬುವವರನ್ನು ಬಾಲರಾಜ್ ಎರಡನೇ ವಿವಾಹವಾಗಿದ್ದ. ಪತಿ ಪತ್ನಿ ನಡುವಿನ ಜಗಳದಲ್ಲಿ ಪತ್ನಿ ತವರು ಮನೆ ಸೇರಿದ್ದಳು. ಇತ್ತ ಯಾರೂ ಇಲ್ಲದ ವೇಳೆ ಮನೆಯ ಫ್ಯಾನ್ ಗೆ ನೇಣುಬಿಗಿದುಕೊಂಡು ಬಾಲರಾಜ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.