ಲಂಡನ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮಾಡಿದ ಮೋಸವನ್ನು ಬಿಚ್ಚಿಟ್ಟಿದ್ದಾನೆ. ಪತ್ನಿ, ತನ್ನ ಸ್ನೇಹಿತೆ ಹಾಗೂ ಆಕೆ ಪತಿ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಳೆಂಬ ವಿಷ್ಯ ಪತಿಗೆ ಗೊತ್ತಾಗಿದೆ. ಬಾತ್ ರೂಮಿನಲ್ಲಿ ಪ್ರಗ್ನೆನ್ಸಿ ಕಿಟ್ ಸಿಕ್ಕಾಗ ಪತಿಗೆ ಅನುಮಾನ ಬಂದಿದೆ. ಪತಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಎನ್ನಲಾಗಿದೆ.
ವರದಿಯ ಪ್ರಕಾರ, ಸಂತ್ರಸ್ತ ಪತಿಗೆ 40 ವರ್ಷ. ಪತ್ನಿಗೆ 38 ವರ್ಷ. ಪತ್ನಿ ಜೊತೆ ಉತ್ತಮ ಸಂಬಂಧ ಹೊಂದಿದ್ದ ಪತಿ ಆಕೆಯನ್ನು ನಂಬಿದ್ದನಂತೆ. ಆದ್ರೆ ಆಕೆಯೇ ತನ್ನ ಅಕ್ರಮ ಸಂಬಂಧದ ಬಗ್ಗೆ ಹೇಳಿದ್ದಾಳೆ. ಸ್ನೇಹಿತೆ ಹಾಗೂ ಆಕೆ ಪತಿ ಜೊತೆ ಮಲಗಿರುವುದಾಗಿ ಹೇಳಿದ್ದಾಳೆ.
ಪತ್ನಿ, ಮಹಿಳೆ ಜೊತೆ ಸಂಬಂಧ ಬೆಳೆಸುವ ಆಸೆಯಿದೆ ಎಂದು ಆಗಾಗ ಹೇಳ್ತಿದ್ದಳಂತೆ. ಆದ್ರೆ ಇದನ್ನು ಪತಿ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಸ್ಲೈಕ್ಲಿಂಗ್ ಗಾಗಿ ಮನೆಯಿಂದ ತುಂಬಾ ಸಮಯ ಹೊರಗಿರ್ತಿದ್ದ ಪತಿಗೆ ಪತ್ನಿ ಮೋಸ ಮಾಡಿದ್ದಾಳೆ. ಸ್ನೇಹಿತೆ ಹಾಗೂ ಆಕೆ ಪತಿ ಜೊತೆ ಸಂಬಂಧ ಬೆಳೆಸಿದ್ದಾಳೆ. ಸತ್ಯ ಹೊರ ಬಿದ್ದ ಮೇಲೆ ಆಘಾತಕ್ಕೊಳಗಾಗಿರುವ ಪೀಡಿತ, ತನ್ನ ಪತ್ನಿಯನ್ನು ಇನ್ನೆಂದೂ ನಂಬುವುದಿಲ್ಲ ಎಂದಿದ್ದಾನೆ.