ಬೆಂಗಳೂರು: ಪತಿ ಮಹಾಶಯನೊಬ್ಬನ ವಿಲಕ್ಷಣತೆ ಕಂಡು ಪತ್ನಿ ದಂಗಾಗಿ ಹೋಗಿರುವ ಘಟನೆಯಿದು. ಕಾಲ್ ಗರ್ಲ್ ಎಂದು ಬಿಂಬಿಸಿ ಪತ್ನಿಯ ಫೋಟೋ ಹಾಗೂ ಮೊಬೈಲ್ ನಂಬರ್ ನ್ನು ಫೇಸ್ ಬುಕ್ ಬುಕ್ ನಲ್ಲಿ ಪತಿಯೇ ಪೋಸ್ಟ್ ಮಾಡಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ನಡೆದಿದೆ.
ಸತ್ಯನಾರಾಯಣ ರೆಡ್ಡಿ ಎಂಬಾತ ಈ ಕೃತ್ಯವೆಸಗಿದ್ದಾನೆ. ಸತ್ಯನಾರಾಯಣ ರೆಡ್ಡಿ 2019ರಲ್ಲಿ ವಿವಹವಾಗಿದ್ದ. ಆದರೆ ಪತ್ನಿಗೆ ಪದೇ ಪದೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಹಿಂಸಿಸುತ್ತಿದ್ದ. ಪತಿಯ ಹಿಂಸೆಗೆ ಬೇಸತ್ತ ಪತ್ನಿ ಕಳೆದ ಒಂದು ವರ್ಷದಿಂದ ಬೇರೆ ಇದ್ದಳು. ಆದರೂ ಸುಮ್ಮನಾಗದ ಆರೋಪಿ ಪತಿ ಸಾಮಾಜಿಕ ಜಾಲತಾಣಗಳಲ್ಲಿ ಪತ್ನಿ ಫೋಟೋ, ಮೊಬೈಲ್ ನಂಬರ್ ಗಳನ್ನು ಹಾಕಿ ಕಾಲ್ ಗರ್ಲ್ ಬೇಕಿದ್ದರೆ ಕರೆ ಮಾಡಿ ಎಂದು ಪೋಸ್ಟ್ ಮಾಡಿದ್ದಾನೆ.
ಕಲಾ ಶಶಿ ಎಂಬ ಫೇಸ್ ಬುಕ್ ಪೇಜ್ ಕ್ರಿಯೇಟ್ ಮಾಡಿ ಅದರಲ್ಲಿ ಪತ್ನಿಯ ಫೋಟೋ, ಮೊಬೈಲ್ ನಂಬರ್ ಹಾಗೂ ಪತ್ನಿಯ ಸಹೋದರನ ಮೊಬೈಲ್ ನಂಬರ್ ಕೂಡ ಪೋಸ್ಟ್ ಮಾಡಿದ್ದಾನೆ. ಇದರಿಂದ ಪತ್ನಿಗೆ ಹಾಗೂ ಆಕೆಯ ಸಹೋದರನಿಗೆ ವ್ಯಾಪಕವಾಗಿ ಫೋನ್ ಕರೆ ಬರುತ್ತಿದ್ದವು. ಬೇಸತ್ತ ಮಹಿಳೆ ಹಾಗೂ ಆಕೆಯ ಸಹೋದರ ನಂದಿನಿ ಲೇಔಟ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪ ಪತಿ ವಿರುದ್ಧ ತನಿಖೆ ನಡೆಸಿದ್ದಾರೆ.