ಹಾಸನ: ನವವಿವಾಹಿತೆ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾರೆ. ಹೇಮಾವತಿ ನದಿಯಲ್ಲಿ 22 ವರ್ಷದ ಪೂಜಾ ಮೃತದೇಹ ಪತ್ತೆಯಾಗಿದೆ.
ಆಗಸ್ಟ್ 5 ರಂದು ಸೇತುವೆಯ ಮೇಲಿಂದ ಪೂಜಾ ಬಿದ್ದಿದ್ದರು. ಹಾಸನ ಜಿಲ್ಲೆ ಸಕಲೇಶಪುರ ಸೇತುವೆ ಬಳಿ ಘಟನೆ ನಡೆದಿದ್ದು, ಇಂದು ಮೃತದೇಹ ಪತ್ತೆಯಾಗಿದೆ. ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಪೂಜಾಳ ಪತಿ ಅಶ್ವತ್ಥ್ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಮೃತ ಪೂಜಾ ಪೋಷಕರು ಹೀಗೆಂದು ಆರೋಪ ಮಾಡಿದ್ದಾರೆ.
ಪತಿ ಮನೆಯವರಿಂದ ಕಿರುಕುಳವಾಗುತ್ತಿದೆ ಎಂದು ಪೂಜಾ ಹೇಳಿದ್ದಳು. ಇದೇ ವಿಚಾರವಾಗಿ ಮಾತನಾಡಲು ಪೋಷಕರು ಅಶ್ವತ್ಥ್ ಮನೆಗೆ ಹೋಗುತ್ತಿದ್ದಂತೆ ಆರೋಪಿ ಓಡಿಹೋಗಿದ್ದ. ಆತನನ್ನು ಕರೆದುಕೊಂಡು ಬರುವುದಾಗಿ ಪೂಜಾ ಕೂಡ ಹೋಗಿದ್ದಳು. ಈ ವೇಳೆ ಪೂಜಾಳನ್ನು ನದಿಗೆ ತಳ್ಳಿದ್ದಾನೆ ಎಂದು ಪೂಜಾ ಪೋಷಕರಿಂದ ಅಶ್ವತ್ಥ್ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಸಕಲೇಶಪುರ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.