
ಗದಗ: ಪತ್ನಿಯೇ ಪತಿಯನ್ನು ಕೊಲೆಗೈದು ಬಳಿಕ ಅಪಘಾತದಲ್ಲಿ ಸಾವು ಎಂದು ಕಥೆ ಕಟ್ಟಿದಳಾ? ಇಂತೊಂದು ಅನುಮಾನದ ಪ್ರಕರಣ ಗದಗ ತಾಲೂಕಿನ ಕೋಟುಮಚಗಿ ಗ್ರಾಮದಲ್ಲಿ ನಡೆದಿದೆ.
ರಾಜ್ಯ ಹೆದ್ದಾರಿಯಲ್ಲಿ ಪತಿ ಮಂಜುನಾಥ್ ಶವ ಪತ್ತೆಯಾಗಿದ್ದು, ಪತ್ನಿ ಶರದಮ್ಮ ವಿರುದ್ಧ ಕುಟುಂಬದವರು ಕೊಲೆ ಆರೋಪ ಮಾಡಿದ್ದಾರೆ. ಆದರೆ ಶಾರದಮ್ಮ ಹೇಳುವ ಪ್ರಕಾರ ತಡರಾತ್ರಿ ಮಂಜುನಾಥ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಮಂಜುನಾಥ್ ಮೃತದೇಹ ಹೆದ್ದಾರಿಯಲ್ಲಿ ಪತ್ತೆಯಾಗಿದೆ ಎಂದಿದ್ದಾಳೆ.
ನಿನ್ನೆ ಸಂಜೆ ಅಕ್ಕನನ್ನು ಭೇಟಿಯಾಗಿದ್ದ ಮಂಜುನಾಥ್ ರಾತ್ರಿ ವಾಪಾಸ್ ಆಗಿದ್ದಾರೆ. ಅಕ್ಕನ ಮನೆಯ ಪಕ್ಕದ ಬಡಾವಣೆಯಲ್ಲಿ ಮಂಜುನಾಥ್ ಹೆಂದತಿ-ಮಕ್ಕಳ ಜೊತೆ ವಾಸವಾಗಿದ್ದ. ಮಧ್ಯರಾತ್ರಿ 3 ಗಂಟೆ ಸುಮಾರಿಗೆ ಬಂದ ಮಮ್ಜುನಾಥ್ ಪತ್ನಿ ಶಾರದಮ್ಮ, ಮಂಜುನಾಥ್ ರಸ್ತೆಯಲ್ಲಿ ಬಿದ್ದಿದ್ದಾರೆ ಎಂದು ತಿಳಿಸಿದ್ದಾಳೆ. ಮಂಜುನಾಥ್ ಅಕ್ಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಶ್ವಾನದಳದೊಂದಿಗೆ ಪೊಲಿಸರು ದೌಡಾಯಿಸಿ ಪರಿಶೀಲಿಸಿದ್ದಾರೆ.
ಮೃತದೇಹದ ವಾಸನೆ ಜಾಡು ಹಿಡಿದ ಶ್ವಾನ ಪೊಲೀಸ್ ಸಿಬ್ಬಂದಿಯೊಂದಿಗೆ ಪತ್ನಿ ಶರದಮ್ಮ ಮನೆ ಮುಂದೆ ಬಂದು ನಿಂತಿದೆ. ತಕ್ಷಣ ಗದಗ ಪೊಲೀಸರು ಪತ್ನಿ ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.