alex Certify ಅನೈತಿಕ ಸಂಬಂಧ ಶಂಕೆಯಿಂದ ಪತಿಯಿಂದಲೇ ಪತ್ನಿ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅನೈತಿಕ ಸಂಬಂಧ ಶಂಕೆಯಿಂದ ಪತಿಯಿಂದಲೇ ಪತ್ನಿ ಹತ್ಯೆ

ಬೆಂಗಳೂರು: ಅನೈತಿಕ ಸಂಬಂಧದ ಆರೋಪದಿಂದ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ಬೆಂಗಳೂರಿನ ಬಸವೇಶ್ವರನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

32 ವರ್ಷದ ನಾಗರತ್ನ ಅವರನ್ನು ಪತಿ ಅಯ್ಯಪ್ಪ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಅನಾಥಾಶ್ರಮದಲ್ಲಿದ್ದ ನಾಗರತ್ನಳನ್ನು 12 ವರ್ಷಗಳ ಹಿಂದೆ ಅಯ್ಯಪ್ಪ ಮದುವೆಯಾಗಿದ್ದ.  ದಂಪತಿಗೆ 11 ವರ್ಷದ ಮಗ, 7 ವರ್ಷದ ಮಗಳು ಇದ್ದು, ಇತ್ತೀಚೆಗೆ ಅಯ್ಯಪ್ಪ ಪತ್ನಿಯ ಮೇಲೆ ಅನುಮಾನ ಪಡುತ್ತಿದ್ದ.

ಇದೇ ವಿಚಾರಕ್ಕೆ ಮೂರು ದಿನಗಳಿಂದ ದಂಪತಿಯ ನಡುವೆ ಗಲಾಟೆ ಆಗುತ್ತಿತ್ತು. ಗಲಾಟೆಯ ವೇಳೆ ಚಾಕುವಿನಿಂದ ಇರಿದು ನಾಗರತ್ನ ಅವರನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...