ಬೆಂಗಳೂರು: ಕೌಟುಂಬಿಕ ಜಗಳಕ್ಕೆ ಪತ್ನಿಯನ್ನೇ ಹತ್ಯೆಗೈದ ಪತಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಆನೇಕಲ್ ಬಳಿಯ ಯಡವನಹಳ್ಳಿಯಲ್ಲಿ ನಡೆದಿದೆ.
ಲಾವಣ್ಯ (26) ಪತಿಯಿಂದ ಹತ್ಯೆಯಾದ ಪತ್ನಿ. ಸಂಪತ್ ಕುಮಾರ್ ಹೆಂಡತಿಯನ್ನೇ ಕೊಂದ ಆರೋಪಿ. ದಂಪತಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಆದರೂ ಪತಿ ಪತ್ನಿ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದ್ದು, ವಿಕೋಪಕ್ಕೆ ತಿರುಗಿದೆ. ನಿನ್ನೆ ಕುಟುಂಬದವರೆಲ್ಲ ಸೇರಿ ಪತಿ-ಪತ್ನಿ ನಡುವೆ ರಾಜಿ ಮಾಡಿಸಿದ್ದಾರೆ. ಬೆಳಿಗ್ಗೆವರೆಗೂ ಮೌನವಾಗಿ ಹಗೆ ಸಾಧಿಸಿದ್ದ ಪತಿ ಮಹಾಶಯ ಇದೀಗ ಪತ್ನಿಯ ಕತ್ತುಕೊಯ್ದು ಕೊಲೆ ಮಾಡಿದ್ದಾನೆ.
ಸಾರ್ವಜನಿಕರೊಂದಿಗೆ ಅನುಚಿತವಾಗಿ ವರ್ತಿಸಿ ವಕೀಲನ ಮೇಲೆ ಹಲ್ಲೆ: ಸಿಪಿಐ ಸಸ್ಪೆಂಡ್
ಅಲ್ಲದೇ ಇಬ್ಬರು ಮಕ್ಕಳ ಮೇಲೂ ಹಲ್ಲೆ ನಡೆಸಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಮುಂದಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ದೌಡಾಯಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.