ದಾವಣಗೆರೆ: ತವರು ಮನೆ ಸೇರಿದ್ದ ಪತ್ನಿಯನ್ನು ಹಾಡಹಗಲೇ ಪತಿ ಅಪಹರಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ದಿಡಗೂರು ಗ್ರಾಮದಲ್ಲಿ ನಡೆದಿದೆ.
ಕೊಪ್ಪ ಬಳಿಯ ನರಸೀಪುರ ನಿವಾಸಿ ಕಾರ್ತಿಕ್ ಎಂಬಾತನ ಜೊತೆ ದಿಡಗೂರಿನ ಅನುಂಧತಿ ನಾಲ್ಕು ವರ್ಷಗಳ ಹಿಂದೆ ವಿವಾಹವಗಿದ್ದರು. ಆದರೆ ಪತಿ ಹಾಗೂ ಮನೆಯವರ ವರದಕ್ಷಿಣೆ ಕಿರುಕುಳ, ಹಿಂಸೆಗೆ ಬೇಸತ್ತ ಅನುಂಧತಿ ತವರು ಮನೆ ಸೇರಿದ್ದಳು.
ಈಗ ಏಕಾಏಕಿ ಅನುಂಧತಿಯ ತವರು ಮನೆ ಬಳಿ ಬಂದ ಪತಿ ಕಾರ್ತಿಕ್ ಹಾಗೂ ಆತನ ಕುಟುಂಬದವರು, ಅನುಂಧತಿಯನ್ನು ಅಮಾನುಷವಾಗಿ ಎಳೆದೊಯ್ದು ಕಾರಿನಲ್ಲಿ ತುಂಬಿ ಅಪಹರಿಸಿದ್ದಾರೆ. ಅಮಾನುಷವಾಗಿ ಎಳೆದಿಯ್ಯುತ್ತಿದ್ದವರನ್ನು ತಡೆಯಲು ಬಂದ ಅನುಂಧತಿ ಕುಟುಂಬಸ್ಥರ ಮೇಲೆ ಕಾರ್ತಿಕ್ ಹಾಗೂ ಇತರರು ಹಲ್ಲೆಗೆ ಮುಂದಾಗಿದ್ದಾರೆ.
ಅನುಂಧತಿಯನ್ನು ಎಳೆದೊಯ್ಯುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.