ದಂಪತಿಯ ನಡುವೆ ಕೋಪವಷ್ಟೇ ಇರಬಾರದು. ತಮಾಷೆಯೂ ಇರಬೇಕು. ಆಗ ಮಾತ್ರ ಸಂಸಾರದ ಬಂಡಿ ಸುಗಮವಾಗಿ ಸಾಗುತ್ತದೆ. ಕೆಲ ದಂಪತಿಗಳು ತಮ್ಮ ಜೀವನದಲ್ಲಿ ಆಗಾಗ್ಗೆ ತಮ್ಮ ತಮ್ಮ ನಡುವೆಯೇ ಕಾಲೆಳೆಯುವುದು, ತಮಾಷೆ ಮಾಡುವುದು ನಡೆಯುತ್ತಿರುತ್ತದೆ. ಇಂತಹ ಸಂದರ್ಭಗಳು ದಾಂಪತ್ಯದಲ್ಲಿದ್ದಾಗಲೇ ಪಾಯಸದ ಸಿಹಿಗೆ ತುಪ್ಪ ಇದ್ದರೆ ಹೇಗೆ ರುಚಿಯಾಗಿರುತ್ತೋ ಹಾಗೆ ಸಂಸಾರವೂ ಸುಖವಾಗಿರುತ್ತದೆ.
ಅಂತೆಯೇ ಡಿಸೆಂಬರ್ 1 ರಂದು ಅಲಾಸ್ಕಾದಲ್ಲಿ ಪತಿಯು ತನ್ನ ಹೆಂಡತಿಯನ್ನು ಹೆದರಿಸುವ ಉಲ್ಲಾಸದ ಕ್ಷಣವನ್ನ ಹಂಚಿಕೊಂಡಿದ್ದಾರೆ. ಹೆಂಡತಿ ಸುತ್ತಿಗೆ ಹಿಡಿರು ರೂಂನ ಬಾಗಿಲಿನಿಂದ ಒಳಪ್ರವೇಶಿಸುತ್ತಾರೆ. ಆಗ ಬಾಗಿಲ ಹಿಂದೆ ಅವಿತಿದ್ದ ಆಕೆಯ ಗಂಡ ಭಯಂಕರವಾದ ಮುಖವಾಡ ಧರಿಸಿ ಪತ್ನಿಯನ್ನು ಬೆದರಿಸಲು ಮುಂದಾಗುತ್ತಾನೆ. ಆಕೆಯು ಭಯದಿಂದಾಗಿ ಕನ್ನಡಿಯನ್ನು ಸುತ್ತಿಗೆಯಿಂದ ಒಡೆದುಹಾಕುತ್ತಾಳೆ.
“ನನ್ನ ಹೆಂಡತಿಯನ್ನು ಹೆದರಿಸುವುದು ತಮಾಷೆಯಾಗಿದೆ ಎಂದು ನಾನು ಭಾವಿಸಿದೆವು. ನಾವು ಪ್ರತಿದಿನವೂ ಪರಸ್ಪರ ತಮಾಷೆ ಮಾಡುತ್ತೇವೆ ಎಂದಿದ್ದಾರೆ.