ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದ್ದು, ತನ್ನ ಪತ್ನಿ ಆಕೆಯ ಪ್ರೇಮಿಯ ಕಾರಿನೊಳಗಿದ್ದಾಗಲೇ ರೆಡ್ ಹ್ಯಾಂಡಾಗಿ ಹಿಡಿದ ಪತಿ ಬಂಪರ್ ಮೇಲೇರಿದ್ದಾನೆ. ಇದರ ನಡುವೆಯೂ ಆತನ ಪತ್ನಿಯ ಪ್ರೇಮಿ ಕಿಲೋಮೀಟರ್ಗಟ್ಟಲೆ ಎಳೆದಾಡಿಸಿಕೊಂಡು ಹೋಗಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ವೈರಲ್ ವೀಡಿಯೋದಲ್ಲಿ ಏನಿದೆ ?
ಅಧಿಕಾರಿಗಳ ಪ್ರಕಾರ, ವ್ಯಕ್ತಿಯ ಪತ್ನಿ ತನ್ನ ಪ್ರೇಮಿಯೊಂದಿಗೆ ಕಾರಿನಲ್ಲಿ ಕುಳಿತಿದ್ದಾಗ ಪತಿ ಎಂಟ್ರಿಯಾಗಿದ್ದಾನೆ. ಆತನನ್ನು ಕಂಡ ಪತ್ನಿಯ ಪ್ರೇಮಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆಗ ವ್ಯಕ್ತಿ ಕಾರಿನ ಬಾನೆಟ್ ಮೇಲೆ ಕುಳಿತಿದ್ದಾನೆ. ಇಷ್ಟಾದರೂ ಆತನ ಪತ್ನಿಯ ಪ್ರೇಮಿ, ಕಾರನ್ನು ಕಿಲೋಮೀಟರ್ ವರಗೆ ಓಡಿಸಿಕೊಂಡು ಹೋಗಿದ್ದಾನೆ.
ಒಬ್ಬ ಯುವಕ ಕಾರಿನ ಬಂಪರ್ ಮೇಲೆ ವ್ಯಕ್ತಿಯೊಬ್ಬ ನೇತಾಡುತ್ತಿರುವುದನ್ನು ಗಮನಿಸಿ ನೋಡಿ ಕಾರನ್ನು ನಿಲ್ಲಿಸಿದ್ದಾನೆ. ಆದರೆ ಪ್ರೇಮಿ ಆ ಯುವಕನ ಮೇಲೆ ಹಲ್ಲೆ ನಡೆಸಿ, ಮಹಿಳೆಯೊಂದಿಗೆ ಕಾರನ್ನು ಓಡಿಸಿಕೊಂಡು ಹೋಗಿದ್ದಾನೆ.
Man Dragged for Kilometres on Car Bonnet after a Minor Dispute in Moradabad UP
pic.twitter.com/eDdbyu52WW— Ghar Ke Kalesh (@gharkekalesh) January 16, 2025