ಲಖ್ನೋ: ಉತ್ತರ ಪ್ರದೇಶದ ಅಲಿಗರ್ ಜಿಲ್ಲೆಯ ಸರಸೋಲ್ ನಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಪತ್ನಿಯೊಂದಿಗೆ ಸರಸವಾಡುತ್ತಿದ್ದ ವೇಳೆಯಲ್ಲಿ ಸಿಕ್ಕಿಬಿದ್ದ ಪ್ರಿಯಕರನನ್ನು ಪತಿ ಬ್ಯಾಟ್ ನಿಂದ ಹೊಡೆದು ಕೊಲೆ ಮಾಡಿದ್ದಾನೆ.
25 ವರ್ಷದ ವಿಕಾಸ್ ಕೊಲೆಯಾದ ಯುವಕ ಎಂದು ಹೇಳಲಾಗಿದೆ. ನೋಯ್ಡಾದ ಅಕಲ್ಪುರ್ ನಗರದ ರಘುಪುರ್ ನಿವಾಸಿಯಾಗಿರುವ ವಿಕಾಸ್ ಎರಡು ಮಕ್ಕಳ ತಾಯಿಯಾಗಿರುವ ಕಮಲಾಳನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡು ಅಕ್ರಮ ಸಂಬಂಧ ಬೆಳೆಸಿದ್ದಾನೆ.
ಕಮಲಾಳ ಪತಿ ಸುಂದರಲಾಲ್ ಹಿಮಾಚಲ ಪ್ರದೇಶದ ಬಿಸ್ಕೆಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಮಕ್ಕಳಿಗೆ ವಿಕಾಸ್ ನನ್ನು ಅಂಕಲ್ ಎಂದು ಪರಿಚಯಿಸಿಕೊಟ್ಟಿದ್ದ ಕಮಲಾ ಆತನೊಂದಿಗೆ ಸಂಬಂಧ ಮುಂದುವರೆಸಿದ್ದಾಳೆ.
ವರ್ಷಾಂತ್ಯದ ರಜೆ ಸಿಕ್ಕ ಸಂಭ್ರಮದಲ್ಲಿ ಸುಂದರ್ ಲಾಲ್ ಊರಿಗೆ ಬಂದಿದ್ದಾನೆ. ಮನೆ ಮುಂದೆ ಮಕ್ಕಳು ಆಟವಾಡುವುದನ್ನು ಗಮನಿಸಿದ ಸುಂದರ್ ಲಾಲ್ ಅವರನ್ನು ಮುದ್ದಾಡಿ ಮನೆಯೊಳಗೆ ಹೋಗುತ್ತಿದ್ದಂತೆ ಕಾಣಬಾರದ ದೃಶ್ಯ ಕಣ್ಣಿಗೆ ಬಿದ್ದಿದೆ. ಪತ್ನಿಯೊಂದಿಗೆ ಅಪರಿಚಿತ ಯುವಕ ಹಾಸಿಗೆ ಹಂಚಿಕೊಂಡಿದ್ದನ್ನು ಗಮನಿಸಿದ ಸುಂದರ ಲಾಲ್ ಆಕ್ರೋಶಗೊಂಡಿದ್ದಾನೆ. ತಪ್ಪಿಸಿಕೊಳ್ಳಲು ಯತ್ನಿಸಿದ ಯುವಕನ ಕೊಲೆ ಮಾಡಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಸಿಟ್ಟಿನಿಂದ ಯುವಕನ ಕೊಲೆ ಮಾಡಿರುವುದಾಗಿ ಸುಂದರ್ ಲಾಲ್ ಒಪ್ಪಿಕೊಂಡಿದ್ದಾನೆ.