
ಮದುವೆ ನಂತರ ಮೊದಲ ರಾತ್ರಿಯಲ್ಲಿ ಹೆಣ್ಣಿನಂತೆ ಮೇಕಪ್ ಮಾಡಿಕೊಂಡು ಬಂದ ಪತಿ ವಿರುದ್ಧ ಪತ್ನಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಉತ್ತರಖಂಡದ ಹರಿದ್ವಾರದಲ್ಲಿ ವಧು ತನ್ನ ಪತಿ ಮತ್ತು ಅತ್ತೆ – ಮಾವನಿಂದ ವಂಚನೆಯಾಗಿದೆ ಎಂದು ಆರೋಪಿಸಿ ರಾಜ್ಯ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.
ತನ್ನ ಪತಿ ಸಲಿಂಗಕಾಮಿ ಎಂದು ನಂಬಿರುವ ಪತ್ನಿ ಸಾಂಪ್ರದಾಯಿಕ ವಿವಾಹ ಸಮಾರಂಭದ ನಂತರ ಮೊದಲ ರಾತ್ರಿಯಲ್ಲಿ ವಿಚಿತ್ರವಾಗಿ ವರ್ತಿಸಿದ್ದಾರೆಂದು ಆರೋಪಿಸಿದ್ದಾಳೆ. ತನ್ನ ಪತಿ ರಾತ್ರಿಯಲ್ಲಿ ಎದ್ದು ಹುಡುಗಿಯಂತೆ ಕಾಣಿಸುವ ರೀತಿಯಲ್ಲಿ ಮೇಕಪ್ ಮಾಡಿಕೊಳ್ಳುತ್ತಾರೆ.. ಈ ನಡವಳಿಕೆಯಿಂದ ದೈಹಿಕ ಅನ್ಯೋನ್ಯತೆಯ ಕೊರತೆಯುಂಟಾಗಿದ್ದು ತನ್ನ ಪತಿ ಸಲಿಂಗಕಾಮಿ ಎಂದು ಅನುಮಾನಿಸಲು ಕಾರಣವಾಗಿದೆ ಎಂದು ಹೇಳಿದ್ದಾರೆ.
ವರನ ಇಂತಹ ವರ್ತನೆಯಿಂದ ಕಂಗೆಟ್ಟ ವಧುವಿನ ಕುಟುಂಬ, ವರನ ಕುಟುಂಬದವರು ಈ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಮೋಸದಿಂದ ಮದುವೆ ಮಾಡಿಕೊಂಡಿದ್ದಾರೆ. ಮದುವೆಗೆ ಲಕ್ಷ ಲಕ್ಷ ರೂಪಾಯಿ ಖರ್ಚು ಮಾಡಲಾಗಿದ್ದು, ವರನಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಲಾಗಿತ್ತು. ಮದುವೆಗೂ ಮುಂಚೆ ಹುಡುಗ – ಹುಡುಗಿ ಮಾತನಾಡಿಕೊಳ್ಳಲು ಅಥವಾ ಫೋನ್ ನಲ್ಲಿ ಮಸೇಜ್ ಕಳಿಸಲು ಆಗದಂತೆ ಹಲವು ಕಾರಣ ನೀಡಿ ತಡೆಹಿಡಿಯಲಾಗಿತ್ತು ಎಂದು ಕುಟುಂಬವು ಆರೋಪಿಸಿದೆ.
ರಾಜ್ಯ ಮಹಿಳಾ ಆಯೋಗವು ಪ್ರಕರಣವನ್ನು ಪರಿಗಣಿಸಿದ್ದು ಆರೋಪಗಳ ತನಿಖೆ ನಡೆಸುತ್ತಿದೆ. ಈ ಪ್ರಕರಣವು ನಿಯೋಜಿತ ವಿವಾಹಗಳಲ್ಲಿ ಪಾರದರ್ಶಕತೆ ಮತ್ತು ಜವಾಬ್ದಾರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ವಧು ಮತ್ತು ಅವಳ ಕುಟುಂಬದ ಪ್ರಶ್ನೆಗಳಿಗೆ ಉತ್ತರಿಸಲು ಕಾನೂನು ಸಹಾಯ ನೀಡಲಾಗುತ್ತದೆ ಎಂದಿದ್ದಾರೆ.