
ಆಕೆಗೆ ಹದಿನೈದು ದಿನಗಳ ಹಿಂದೆ ಮದುವೆಯಾಗಿತ್ತು. ಹೊಸ ಜೀವನದ ಹೊಸ್ತಿಲಿಗೆ ಆಸೆಗಣ್ಣುಗಳಿಂದಲೇ ಗಂಡನ ಮನೆಗೆ ಹೆಜ್ಜೆ ಇಟ್ಟಿದ್ದ ಆಕೆಗೆ, ತಿಂಗಳು ಕಳೆಯುವ ಮುನ್ನವೇ ನರಕ ದರ್ಶನವಾಗಿದೆ. ತನ್ನ ಗಂಡನ ಸಹೋದರನೆ ಇಪ್ಪತ್ತು ವರ್ಷದ ನವವಧುವಿನ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ್ದಾನೆ.
ಈ ಅಮಾನವೀಯ, ಅನಾಗರಿಕ ಘಟನೆ ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ, ಡಾಂಕುರ್ ಪ್ರದೇಶದಲ್ಲಿ ಗುರುವಾರದಂದು ನಡೆದಿದೆ. ಹೀನ ಕೃತ್ಯ ಎಸಗಿದ ಪಾಪಿ ತಲೆಮರೆಸಿಕೊಂಡಿದ್ದು, ಪೊಲೀಸರ ವಿಶೇಷ ತಂಡವೊಂದು ಆತನನ್ನು ಹುಡುಕಲು ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.
WAR BREAKING: ರಷ್ಯನ್ ಸೇನೆಯಿಂದ ಉಕ್ರೇನ್ ಮಹಿಳೆಯರ ಮೇಲೆ ಅತ್ಯಾಚಾರ; ವಿದೇಶಾಂಗ ಸಚಿವರ ಗಂಭೀರ ಆರೋಪ
ಸಂತ್ರಸ್ತೆಯ ಪತಿ ಗುರುವಾರ ಬೆಳಗ್ಗೆ, ಸುಮಾರು ಹನ್ನೊಂದು ಗಂಟೆಯ ಸಮಯದಲ್ಲಿ ಮನೆಯಿಂದ ಕೆಲಸಕ್ಕೆ ತೆರಳಿದಾಗ ಈ ಘಟನೆ ನಡೆದಿದೆ. ಆಕೆಯ ಕೂಗು ಹೊರಗೆ ಕೇಳಿಸಬಾರದು ಎಂದು ಆರೋಪಿ, ಲೌಡ್ ಸ್ಪೀಕರ್ ನಲ್ಲಿ ಮ್ಯೂಸಿಕ್ ಪ್ಲೇ ಮಾಡಿದ್ದ ಎಂದು ಸಂತ್ರಸ್ತೆ ನೀಡಿರುವ ದೂರಿನಿಂದ ತಿಳಿದು ಬಂದಿದೆ.
ಕೃತ್ಯ ಎಸಗಿದ ಆರೋಪಿ ತಕ್ಷಣ ಆರೋಪಿ, ಸ್ಥಳದಿಂದ ಪರಾರಿಯಾಗಿದ್ದಾನೆ. ನಡೆದ ಘಟನೆ ಬಗ್ಗೆ ಮನೆಯವರಿಗೆ ವಿವರಿಸಿದ ಆಕೆ ಪೊಲೀಸರ ಬಳಿ ದೂರು ನೀಡಿದ್ದಾಳೆ. ಅತ್ಯಾಚಾರ ನಡೆಯುವ ಸಂದರ್ಭದಲ್ಲಿ ಸಂತ್ರಸ್ತೆಯ ಸಹೋದರಿ ಹಾಗೂ ಅತ್ತೆ ಮನೆಯ ತಾರಸಿ ಮೇಲೆ ಇದ್ದರು ಎಂದು ತಿಳಿದು ಬಂದಿದೆ. ಸಧ್ಯ ಆಕೆಯ ದೂರನ್ನು ಸ್ವೀಕರಿಸಿರುವ ಪೊಲೀಸರು, ಮನೆಯವರನ್ನು ವಿಚಾರಣೆಗೆ ಒಳಪಡಿಸಿದ್ದು, ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.