ನಾಗ್ಪುರ: ಕೆಲ ದಿನಗಳ ಹಿಂದೆ ನಡೆದಿದ್ದ ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಆರೋಪಿಯಾರೆಂಬುದನ್ನು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ನಾಗ್ಪುರ ಬಿಜೆಪಿ ನಾಯಕಿ ಸನಾ ಖಾನ್ ಹತ್ಯೆ ಘಟನೆ ಬಳಿಕ ನಾಪತ್ತೆಯಾಗಿದ್ದ ಪತಿ ಅಮಿತ್ ಸಾಹುನನ್ನು ಮಧ್ಯಪ್ರದೇಶದ ಜಬಲ್ಪುರದಲ್ಲಿ ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ತಾನೇ ಪತ್ನಿಯನ್ನು ಕೊಂದಿರುವುದಾಗಿ ಬಾಯ್ಬಿಟ್ಟಿದ್ದಾನೆ.
ಅಮಿತ್ ಸಾಹು ಪತ್ನಿ ಸನಾ ಖಾನ್ ರನ್ನು ಕೊಂದು ದೇಹವನ್ನು ನದಿಗೆ ಎಸೆದಿದ್ದಾರೆ. ಆದರೆ ಅವರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಮೃತದೇಹಕ್ಕಾಗಿ ಶೋದ ಕರ್ಯ ಮುಂದುವರೆದಿದೆ. ಸನಾ ಖಾನ್ ಜಬಲ್ಪುರಕ್ಕೆ ಭೇಟಿ ನೀಡಿದ್ದರು. ಬಳಿಕ ಅವರು ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 1ರಂದು ಸನಾ ಖಾನ್ ನಾಗ್ಪುರದಿಂದ ಬಸ್ ನಲ್ಲಿ ಜಬಲ್ಪುರಕ್ಕೆ ತೆರಳಿದ್ದರು. ಬಳಿಕ ತನ್ನ ತಾಯಿಗೆ ಕರೆ ಮಾಡಿ ಮಾತನಾಡಿದ್ದರು. ಜಬಲ್ಪುರದಲ್ಲಿ ತನ್ನ ಪತಿ ಅಮಿತ್ ಸಾಹುನನ್ನು ಭೇಟಿಯಾಗಿದ್ದರು. ಕೆಲ ಸಮಯದ ಬಳಿಕ ಅವರು ನಾಪತ್ತೆಯಾಗಿದ್ದರು. ಮತ್ತೆ ಅವರ ತಾಯಿ ಫೋನ್ ಮಾಡಿದರೆ ಕರೆ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಸ್ತುತ ಸನಾ ಖಾನ್ ಪತಿ ಅಮಿತ್ ಸಾಹು ಹಾಗೂ ಇನ್ನೋರ್ವನನ್ನು ಬಂಧಿಸಲಾಗಿದೆ. ಅಮಿತ್ ಸಾಹು ತನ್ನ ಪತ್ನಿಯನ್ನೇ ಕೊಲ್ಲಲು ಕಾರಣವೇನು ಎಂಬುದನ್ನು ಬಾಯ್ಬಿಟ್ಟಿಲ್ಲ ಎಂದು ತಿಳಿಸಿದ್ದಾರೆ.