alex Certify ಜಮೀನು ಮಾರಿ ಪತ್ನಿ ಖಾತೆಗೆ ಹಣ ಹಾಕಿದ್ದೇ ತಪ್ಪಾಯ್ತು…..! ಪ್ರೇಮಿ ಜೊತೆ 2 ಮಕ್ಕಳ ತಾಯಿ ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮೀನು ಮಾರಿ ಪತ್ನಿ ಖಾತೆಗೆ ಹಣ ಹಾಕಿದ್ದೇ ತಪ್ಪಾಯ್ತು…..! ಪ್ರೇಮಿ ಜೊತೆ 2 ಮಕ್ಕಳ ತಾಯಿ ಪರಾರಿ

Husband had added 39 lakhs by selling land wife run away with lover with  money | Bihar: पति ने जमीन बेचकर जोड़े 39 लाख रुपये, पत्नी पैसे लेकर आशिक  के साथ हुई

ವಿವಾಹೇತರ ಸಂಬಂಧದ ಬಗ್ಗೆ ಅನೇಕ ಸುದ್ದಿಗಳನ್ನು ಕೇಳಿರ್ತೀರಿ. ಬಿಹಾರದ ಪಾಟ್ನಾದಲ್ಲಿ ಪತ್ನಿಯೊಬ್ಬಳು ಪತಿಗೆ ಸರಿಯಾಗಿ ಪಂಗನಾಮ ಹಾಕಿದ್ದಾಳೆ. ಪತಿ, ಭೂಮಿ ಮಾರಾಟ ಮಾಡಿ ಹಣ ಕೂಡಿಟ್ಟಿದ್ದನಂತೆ. ಪ್ರೇಮಿ ಜೊತೆ ಪರಾರಿಯಾದ ಪತ್ನಿ, 39 ಲಕ್ಷ ರೂಪಾಯಿ ತೆಗೆದುಕೊಂಡು ಓಡಿ ಹೋಗಿದ್ದಾಳೆ.

ಮಹಿಳೆಗೆ ಇಬ್ಬರು ಮಕ್ಕಳಿದ್ದಾರೆ. ಆಕೆಯ ಪತಿ, ನಗರದಲ್ಲಿ ಭೂಮಿ ಖರೀದಿಸಲು ಪೂರ್ವಜರ ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಬ್ಯಾಂಕ್ ಖಾತೆಗೆ 39 ಲಕ್ಷ ರೂಪಾಯಿ ಹಾಕಿದ್ದ ಎನ್ನಲಾಗಿದೆ. ಮಹಿಳೆ 11 ರೂಪಾಯಿ ಬಿಟ್ಟು ಎಲ್ಲ ಹಣ ವಿತ್ ಡ್ರಾ ಮಾಡಿದ್ದಾಳೆ. ಪತಿ ಪೊಲೀಸರಿಗೆ ದೂರು ನೀಡಿದ್ದಾನೆ.

14 ವರ್ಷಗಳ ಹಿಂದೆ, ಬಿಹ್ತಾದ ಕೌಡಿಯಾ ನಿವಾಸಿ ಬ್ರಜ್‌ಕಿಶೋರ್ ಸಿಂಗ್, ಪ್ರಭಾವತಿಯನ್ನು ವಿವಾಹವಾಗಿದ್ದ. ಮದುವೆಯ ನಂತರ, ಇಬ್ಬರೂ ಸಂತೋಷದಿಂದಿದ್ದರು. ಇಬ್ಬರು ಮಕ್ಕಳನ್ನು ಹೊಂದಿರುವ ಮಹಿಳೆ, ಪತಿ ಕೆಲಸಕ್ಕೆ ಹೋದಾಗ, ಪಕ್ಕದ ಮನೆಯಲ್ಲಿ ವಾಸವಾಗಿರುವ ಪ್ರೇಮಿ ಜೊತೆ ಓಡಿ ಹೋಗಿದ್ದಾಳೆ.

ಮಕ್ಕಳಿಗೆ ಒಳ್ಳೆ ಶಿಕ್ಷಣ ನೀಡುವ ಹಿನ್ನಲೆಯಲ್ಲಿ ಬಿಹಟಾದಲ್ಲಿ ಬಾಡಿಗೆ ಮನೆ ಮಾಡಿದ್ದ ಬ್ರಜ್ ಕಿಶೋರ್, ಗುಜರಾತಿನಲ್ಲಿ ಕೆಲಸ ಮಾಡ್ತಿದ್ದ. ಹೆಂಡತಿ ಮಾತಿಗೆ ಬೆಲೆ ಕೊಟ್ಟು ತನ್ನ ಪೂರ್ವಜರ ಜಮೀನು ಮಾರಾಟ ಮಾಡಿದ್ದ. ಆಗ ಬಂದ 39 ಲಕ್ಷ ರೂಪಾಯಿಯನ್ನು ಪತ್ನಿ ಖಾತೆಗೆ ಹಾಕಿದ್ದ. ಗುಜರಾತ್ ನಿಂದ ಮನೆಗೆ ಬಂದಾಗ ಮನೆ ಬಾಗಿಲು ಹಾಕಿತ್ತು. ಕರೆ ಮಾಡಿದ್ರೆ ಫೋನ್ ಸ್ವಿಚ್ ಆಫ್ ಬರ್ತಿತ್ತು. ಬ್ಯಾಂಕ್ ಖಾತೆ ಪರಿಶೀಲಿಸಿದಾಗ ದಂಗಾಗಿದ್ದಾನೆ. ಆಕೆ ಖಾತೆಯಿಂದ ಪ್ರೇಮಿ ಖಾತೆಗೆ ಹಣ ವರ್ಗಾವಣೆಯಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...