ಕೊರೊನಾ ವಿಶ್ವದ ಅನೇಕ ದೇಶಗಳ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಿದೆ. ಆದ್ರೆ ವಿಶ್ವದ ಅನೇಕ ಶ್ರೀಮಂತರಿಗೆ ಇದ್ರಿಂದ ಲಾಭವಾಗಿದೆ. ವಿಪತ್ತನ್ನು ಅವಕಾಶವನ್ನಾಗಿ ಪರಿವರ್ತಿಸುವ ಕಲೆ ಭಾರತೀಯರಿಗೆ ಗೊತ್ತಿದೆ. ಕೊರೊನಾ ಸಮಯದಲ್ಲೇ ಭಾರತದ 40 ಉದ್ಯಮಿಗಳು ಕೋಟ್ಯಾಧಿಪತಿಗಳ ಪಟ್ಟಿ ಸೇರಿದ್ದಾರೆ. ಇದರೊಂದಿಗೆ ಭಾರತದ ಒಟ್ಟು 177 ಜನರು ಕೋಟ್ಯಾಧಿಪತಿಗಳ ಪಟ್ಟಿಗೆ ಸೇರಿದ್ದಾರೆ.
ಹುರುನ್ ಗ್ಲೋಬಲ್ 2021ರ ಅನುಸಾರ, ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇದ್ರ ಜೊತೆಗೆ ವಿಶ್ವದ ಎಂಟನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ವರದಿಯ ಪ್ರಕಾರ, ಅಂಬಾನಿಯ ಸಂಪತ್ತು ಶೇಕಡಾ 24 ರಷ್ಟು ಹೆಚ್ಚಾಗಿದೆ. ಅಂಬಾನಿಯ ನಿವ್ವಳ ಮೌಲ್ಯ 83 ಅರಬ್ ಡಾಲರ್ ಎಂದು ಅಂದಾಜಿಸಲಾಗಿದೆ.
ಗುಜರಾತ್ ಕೈಗಾರಿಕೋದ್ಯಮಿ ಗೌತಮ್ ಅದಾನಿಯ ಸಂಪತ್ತು ಕೂಡ ಗಮನಾರ್ಹವಾಗಿ ಹೆಚ್ಚಾಗಿದೆ. 2020 ರಲ್ಲಿ ಅವರ ಸಂಪತ್ತು 32 ಅರಬ್ ಡಾಲರ್ ತಲುಪಿದೆ. ಅವರು ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 48 ನೇ ಸ್ಥಾನಕ್ಕೇರಿದ್ದಾರೆ. ಮುಖೇಶ್ ಅಂಬಾನಿಯ ನಂತರ ಅವರು ಎರಡನೇ ಶ್ರೀಮಂತ ಭಾರತೀಯರಾಗಿದ್ದಾರೆ. ಅವರ ಸಹೋದರ ವಿನೋದ್ ಅವರ ಸಂಪತ್ತು 128 ಪ್ರತಿಶತದಷ್ಟು ಹೆಚ್ಚಳಗೊಂಡು 9.8 ಅರಬ್ ಡಾಲರ್ ಆಗಿದೆ.
ಶಿವ ನಾಡರ್ ಕುಟುಂಬ 27 ಅರಬ್ ಡಾಲರ್ ಸಂಪತ್ತಿನೊಂದಿಗೆ ಮೂರನೇ ಸ್ಥಾನದಲ್ಲಿದೆ. ಜಾಗತಿಕ ಪಟ್ಟಿಯಲ್ಲಿ ಅವರು 58 ನೇ ಸ್ಥಾನದಲ್ಲಿದ್ದಾರೆ. ಆರ್ಸೆಲರ್ ಮಿತ್ತಲ್ ಸಮೂಹದ ಲಕ್ಷ್ಮಿ ಎನ್ ಮಿತ್ತಲ್ ವಿಶ್ವದ 104 ನೇ ಶ್ರೀಮಂತ ವ್ಯಕ್ತಿ. ಅವರು ಭಾರತದ ನಾಲ್ಕನೇ ಶ್ರೀಮಂತ ಕೈಗಾರಿಕೋದ್ಯಮಿ. ಸೀರಮ್ ಸಂಸ್ಥೆ ಸೈರಸ್ ಪೂನವಾಲಾ ಭಾರತದ ಐದನೇ ಶ್ರೀಮಂತ ವ್ಯಕ್ತಿ. ಅವರು 18.5 ಅರಬ್ ಡಾಲರ್ ಆಸ್ತಿ ಹೊಂದಿದ್ದಾರೆ.
ಟೆಸ್ಲಾ ಎಲಾನ್ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಕಳೆದ ವರ್ಷದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದ ಜೆಫ್ ಬೆಜೋಸ್ ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್, ಬಿಲ್ ಗೇಟ್ಸ್ ಮತ್ತು ಮಾರ್ಕ್ ಜುಕರ್‌ಬರ್ಗ್ ಕ್ರಮವಾಗಿ ಮೂರನೇ, ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದ್ದಾರೆ.