ಇಯಾನ್ ಚಂಡಮಾರುತವು ಫ್ಲೋರಿಡಾದ ಗಲ್ಫ್ ಕರಾವಳಿಗೆ ಅಪ್ಪಳಿಸಿದ್ದು, ದುರಂತವನ್ನು ತಂದೊಡ್ಡಿದೆ. ಮಧ್ಯಾಹ್ನ 3:05 ಕ್ಕೆ ಅಪ್ಪಳಿಸಿದ್ದು, ಫೋರ್ಟ್ ಮೈಯರ್ಸ್‌ನ ಪಶ್ಚಿಮಕ್ಕಿರುವ ದ್ವೀಪವಾದ ಕಾಯೋ ಕೋಸ್ಟಾ ಬಳಿ ಗಂಟೆಗೆ 150 ಮೈಲುಗಳಷ್ಟು ನಿರಂತರ ಗಾಳಿಯೊಂದಿಗೆ ದಾಳಿ ಮಾಡಿದೆ.
ಯುಎಸ್ ರಾಷ್ಟ್ರೀಯ ಹರಿಕೇನ್ ಸೆಂಟರ್ ವರದಿ ಪ್ರಕಾರ ಇತ್ತೀಚಿನ ವರ್ಷಗಳಲ್ಲಿ ಯುಎಸ್ ಕಂಡ ಪ್ರಬಲ ಚಂಡಮಾರುತಗಳಲ್ಲಿ ಇದು ಒಂದಾಗಿದೆ. ಚಂಡಮಾರುತದ ಆರ್ಭಟಕ್ಕೆ ಜನರು ತತ್ತರಿಸುತ್ತಿರುವ ದೃಶ್ಯಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹೊರಹೊಮ್ಮಿವೆ.
ಫ್ಲೋರಿಡಾ ನಿವಾಸಿಗಳು ಹಂಚಿಕೊಂಡಿರುವ ವೀಡಿಯೋಗಳಲ್ಲಿ ಮನೆಗಳಲ್ಲಿ ನೀರು, ವಾಹನಜಲಾವೃತವಾದ ಉದಾಹರಣೆ ಇವೆ. ಫೋರ್ಟ್ ಮೈಯರ್ಸ್ ಬೀಚ್ ಪಟ್ಟಣವು ಬಹುತೇಕ ಮುಳುಗಿದೆ. ಸ್ಯಾನಿಬೆಲ್ ದ್ವೀಪವೂ ಸಹ ನೀರಿನ ರಭಸಕ್ಕೆ ನಲುಗುತ್ತಿರುವುದನ್ನು ಸಹ ಕಾಣಬಹುದು.