ಗೂಗಲ್ ಮ್ಯಾಪ್ ಬಳಸಿ ಕಾಡು ದಾರಿಯಲ್ಲಿ ಹೋದ ಘಟನೆ ಅಥವಾ ಇನ್ನೆಲ್ಲೂ ಲೊಕೇಷನ್ ತೋರಿಸುವ ಎಡವಟ್ಟಗಳು ಸಾಮಾನ್ಯವಾಗಿ ನಡೆಯುತ್ತಿರುತ್ತದೆ. ಇಲ್ಲಿ ರೆಡ್ಡಿಟ್ ಬಳಕೆದಾರರೊಬ್ಬರು ಗೂಗಲ್ ಮ್ಯಾಪ್ ನಲ್ಲಿ ಕಂಡುಕೊಂಡ ಅಸಾಮಾನ್ಯ ಆವಿಷ್ಕಾರವೊಂದನ್ನು ಹಂಚಿಕೊಂಡಿದ್ದಾರೆ.
ಜನವಸತಿಯಿಲ್ಲದ ದ್ವೀಪದಲ್ಲಿ ಬರ್ಗರ್ ಕಿಂಗ್ ಶಾಖೆಯನ್ನು ಗೂಗಲ್ ಮ್ಯಾಪ್ ನಲ್ಲಿ ತೋರಿಸುತ್ತಿದೆ. ಪಶ್ಚಿಮ ಏಷ್ಯಾದ ಒಮಾನ್ ಕರಾವಳಿಯ ನಿರ್ಜನ ದ್ವೀಪದಲ್ಲಿ ಬರ್ಗರ್ ಕಿಂಗ್‌ನ ಶಾಖೆಯ ಪಿನ್ ತೋರಿಸುವ ಸ್ಕ್ರೀನ್‌ಶಾಟ್ ಅನ್ನು ಅವರು ಪೋಸ್ಟ್ ಮಾಡಿದ್ದಾರೆ. ಹಸಿದಿದ್ದ ಅವರು ಗೂಗಲ್ ಮ್ಯಾಪ್ ನಲ್ಲಿ ಬರ್ಗರ್ ಶಾಖೆ ಎಲ್ಲಿದೆ ಎಂಬುದನ್ನು ಸರ್ಚ್ ಮಾಡಿದ್ದಾರೆ. ಈ ವೇಳೆ ನಿರ್ಜನ ಪ್ರದೇಶದಲ್ಲಿ ಗೂಗಲ್ ಮ್ಯಾಪ್ ಲೊಕೇಶನ್ ತೋರಿಸಿದ್ದು, ಅವರು ಶಾಕ್ ಆಗಿದ್ದಾರೆ.
“ಒಮಾನ್ ಕರಾವಳಿಯಲ್ಲಿ ಸ್ಪಷ್ಟವಾಗಿ ನಿರ್ಜನವಾಗಿರುವ ಈ ದ್ವೀಪದಲ್ಲಿ ಬರ್ಗರ್ ಕಿಂಗ್ ಪಿನ್” ಎಂದು ಪೋಸ್ಟ್‌ಗೆ ಶೀರ್ಷಿಕೆ ನೀಡಲಾಗಿದೆ. ಇದಕ್ಕೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.
ಒಬ್ಬ ಬಳಕೆದಾರರು, “ಯಾರೋ ದ್ವೀಪಕ್ಕೆ ಬಂದಿಳಿಯುತ್ತಾರೆ ಮತ್ತು ಅಲ್ಲಿ ಸ್ವಲ್ಪ ಆಹಾರವನ್ನು ಪಡೆಯಲು ನಿರೀಕ್ಷಿಸುತ್ತಾರೆ” ಎಂದಿದ್ದಾರೆ. ಮತ್ತೊಬ್ಬರು, “ಬಹುಶಃ ಜೈವಿಕ ವಿಘಟನೆಯಾಗದ ಬರ್ಗರ್ ಕಿಂಗ್ ಹೊದಿಕೆಯು ಅಲ್ಲಿಯೇ ಇರುವುದನ್ನು ಕಂಡುಕೊಂಡಿದ್ದೀರಾ?” ಎಂದೆಲ್ಲಾ ಪ್ರತಿಕ್ರಿಯಿಸಿದ್ದಾರೆ.
ಇಂತಹ ವಿಚಿತ್ರ ಆವಿಷ್ಕಾರವನ್ನು ಮಾಡಿರುವುದು ಇದೇ ಮೊದಲಲ್ಲ. ಆಗಸ್ಟ್‌ನಲ್ಲಿ, @ಹೈಡ್.ಆನ್.ಗೂಗಲ್.ಅರ್ಥ್ ಹೆಸರಿನ ಬಳಕೆದಾರರು ನ್ಯೂಯಾರ್ಕ್‌ನ ಇಥಾಕಾದಲ್ಲಿನ ಜನಪ್ರಿಯ ಸ್ಥಳದಲ್ಲಿ ಸೇತುವೆಯ ಕೆಳಗೆ ತೆವಳುವ ಆಕೃತಿಯನ್ನು ಗುರುತಿಸಿದ್ದರು. ಸೇತುವೆಯ ಕೆಳಗೆ ನಿಗೂಢ ಆಕೃತಿಯನ್ನು ವೀಕ್ಷಿಸಿದ ನಂತರ ಹೆಚ್ಚಿನ ನೆಟ್ಟಿಗರು ಭಯಭೀತರಾಗಿದ್ದರು.