alex Certify ನೀರಿನಲ್ಲಿ ಕುಸಿದ ಆಮ್ಲಜನಕ ಪ್ರಮಾಣ: ನೂರಾರು ಮೀನುಗಳ ಮಾರಣಹೋಮ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನೀರಿನಲ್ಲಿ ಕುಸಿದ ಆಮ್ಲಜನಕ ಪ್ರಮಾಣ: ನೂರಾರು ಮೀನುಗಳ ಮಾರಣಹೋಮ

ಗುವಾಹಟಿಯ ದಿಘಾಲಿಪುಖುರಿ ವಾಟರ್​ ಟ್ಯಾಂಕ್​ನಲ್ಲಿ ನೂರಾರು ಮೀನುಗಳ ಮಾರಣಹೋಮ ನಡೆದಿದೆ. ಮೀನುಗಳು ಏಕೆ ಸಾವಿಗೀಡಾಗಿದೆ ಎಂಬ ತನಿಖೆ ನಡೆಸಲು ಮೀನಿನ ಮಾದರಿಗಳನ್ನ ಪರಿಶೀಲನೆ ನಡೆಸಲಾಗಿದ್ದು ಇದರ ಪ್ರಕಾರ ಆಮ್ಲಜನಕದ ಸವಕಳಿ ಹಾಗೂ ಟ್ಯಾಂಕ್​ನಲ್ಲಿ ಅತಿಯಾದ ಆರ್ಗಾನಿಕ್​ ಲೋಡ್​ ಇದ್ದುದೇ ಈ ಮರಣಮೃದಂಗಕ್ಕೆ ಕಾರಣ ಎಂದು ತಿಳಿದುಬಂದಿದೆ.

ಬೇರೆ ಬೇರೆ ಜಾತಿಗೆ ಸೇರಿದ ಒಟ್ಟು ಸರಿ ಸುಮಾರು 600 ಕೆಜಿ ತೂಕದ 400ಕ್ಕೂ ಅಧಿಕ ಮೀನುಗಳು ನೀರಿನ ತೊಟ್ಟಿಯಲ್ಲಿ ಸಾವನ್ನಪ್ಪಿವೆ. ಆಸ್ಸಾಂ ಮೀನುಗಾರಿಕಾ ಸಚಿವ ಪರಿಮಳ್​ ಶುಕ್ಲವೈದ್ಯ ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನೀರಿನಲ್ಲಿ ಆಮ್ಲಜನಕ ಪ್ರಮಾಣದ ಕುಸಿತ ಹಾಗೂ ಟ್ಯಾಂಕ್​ನಲ್ಲಿ ಅತಿಯಾದ ಸಾವಯವ ಪದಾರ್ಥ ಸೇರಿದ್ದರಿಂದ ಈ ಘಟನೆ ಸಂಭವಿಸಿದೆ. ಮೀನುಗಳ ಮಾದರಿಯನ್ನ ತೆಗೆದುಕೊಂಡು ನಡೆಸಲಾದ ಪರಿಶೀಲನೆಯಲ್ಲಿ ಮೀನುಗಳ ಸಾವು ಯಾವುದೇ ವಿಷ ಪದಾರ್ಥದ ಸೇವನೆಯಿಂದಲ್ಲ ಬದಲಾಗಿ ಪರಿಸರ ನಾಶದಿಂದಾಗಿ ಎಂದು ತಿಳಿದುಬಂದಿದೆ ಅಂತಾ ಶುಕ್ಲವೈದ್ಯ ಹೇಳಿದ್ದಾರೆ.

ನೀರಿನಲ್ಲಿ ಆಮ್ಲಜನಕ ಮಟ್ಟವನ್ನ ಕೃತಕವಾಗಿ ಏರಿಕೆ ಮಾಡುವ ಸಲುವಾಗಿ ಅಧಿಕಾರಿಗಳು ಪಂಪ್​ ಮೂಲಕ ನೀರನ್ನ ಹಾಕೋದು ಹಾಗೂ ಯಾಂತ್ರಿಕೃತ ದೋಣಿಗಳಿಂದ ನೀರಿನಲ್ಲಿ ತರಂಗ ಸೃಷ್ಟಿಸುವ ಕಾರ್ಯ ಮಾಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...