ಸ್ವಚ್ಛಂದವಾಗಿ ಆಕಾಶದಲ್ಲಿ ಹಾರಾಡುತ್ತಿದ್ದ ನೂರಾರು ಪಕ್ಷಿಗಳು ಇದ್ದಕ್ಕಿದ್ದಂತೆ ನೆಲಕ್ಕುರಳಿರುವ ಘಟನೆ ಮೆಕ್ಸಿಕೋದಲ್ಲಿ ನಡೆದಿದೆ.
ಹಳದಿ ತಲೆಯ ಕಪ್ಪು ಹಕ್ಕಿಗಳ ಹಿಂಡು ಏಕಾಏಕಿ, ಆಕಾಶದಿಂದ ನೆಲಕ್ಕೆ ಕುಸಿದು ಬಿದ್ದ ವಿಚಿತ್ರ ಘಟನೆಯು ಸೆಕ್ಯುರಿಟಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ವಿಡಿಯೋ ವೈರಲ್ ಆಗಿದೆ.
ಈ ಘಟನೆ ಫೆಬ್ರವರಿ 7ರಂದು ಮೆಕ್ಸಿಕೋದ ಚಿಹೌಹುವಾದಲ್ಲಿ ನಡೆದಿದೆ. ನೆಲಕ್ಕೆ ಬಿದ್ದ ಕೆಲವು ಹಕ್ಕಿಗಳು ತಕ್ಷಣವೇ ಹಾರಿ ಹೋಗಿವೆ. ಆದರೆ ಹಲವಾರು ಹಕ್ಕಿಗಳು ಬಿದ್ದ ಸ್ಥಳದಲ್ಲಿಯೇ ಸಾವನಪ್ಪಿವೆ. ಪಾದಚಾರಿ ಮಾರ್ಗದಲ್ಲಿ ನೂರಾರು ಹಕ್ಕಿಗಳು ಸತ್ತು ಬಿದ್ದಿರುವುದನ್ನು ಕಂಡು ಆಘಾತಕ್ಕೆ ಒಳಗಾದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಸೋಮವಾರ ಬೆಳಿಗ್ಗೆ 8.30 ರ ಸುಮಾರಿಗೆ ಹಕ್ಕಿಗಳ ಸಾಮೂಹಿಕ ಸಾವಿನ ಬಗ್ಗೆ ಫೋನ್ ಕರೆಗಳು ಬರತೊಡಗಿದವು, ಸ್ಥಳಕ್ಕೆ ಹೋಗಿ ನೋಡಿದಾಗ ಸುಮಾರು ನೂರು ಹಕ್ಕಿಗಳು ನೆಲದ ಮೇಲೆ ಸತ್ತು ಬಿದ್ದಿದ್ದವು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪಕ್ಷಿಗಳ ನಿಗೂಢ ಸಾವಿನ ಸುತ್ತ ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ. ಕೆಲವು ತಜ್ಞರು ಪಕ್ಷಿಗಳು ಈ ರೀತಿ ದಿಢೀರ್ ನೆಲಕ್ಕುರಳಲು 5ಜಿ ತರಂಗಾಂತರ ಅಳವಡಿಕೆ ನೇರ ಕಾರಣ ಎಂದು ಹೇಳಿದ್ದಾರೆ. ಇನ್ನು ಪಶು ವೈದ್ಯರು ವಾತಾವರಣದಲ್ಲಿ ಹೆಚ್ಚಾಗುತ್ತಿರುವ ಮಾಲಿನ್ಯ ಇದಕ್ಕೆ ಕಾರಣ ಎನ್ನುತ್ತಿದ್ದಾರೆ.
https://twitter.com/Reuters/status/1493059924007567360?ref_src=twsrc%5Etfw%7Ctwcamp%5Etweetembed%7Ctwterm%5E1493059924007567360%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-hundreds-of-birds-mysteriously-fall-from-sky-drop-dead-mexico-watch-5242860%2F
https://twitter.com/FormerDirtDart/status/1493060710741467141?ref_src=twsrc%5Etfw%7Ctwcamp%5Etweetembed%7Ctwterm%5E1493060710741467141%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-hundreds-of-birds-mysteriously-fall-from-sky-drop-dead-mexico-watch-5242860%2F