ಮಹಿಳೆಯರಿಗೆ ಪದೇ ಪದೇ ಸುಸ್ತಾಗುವುದು, ತಲೆಸುತ್ತಿ ಬರುವುದು, ಪ್ರಜ್ಞೆ ತಪ್ಪುವುದು ಮೊದಲಾದ ಲಕ್ಷಣಗಳು ಕಂಡು ಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ಥೈರಾಯ್ಡ್ ಪ್ರಮಾಣದಲ್ಲಿ ಹೆಚ್ಚು ಕಡಿಮೆಯಾಗುವುದರಿಂದಲೂ ಈ ಲಕ್ಷಣಗಳು ಕಂಡು ಬರುತ್ತವೆ ಎಂಬುದು ನಿಮಗೆ ನೆನಪಿರಲಿ.
ವಿಪರೀತ ತಲೆನೋವು, ತಲೆ ತಿರುಗುವುದು, ನಡೆಯುತ್ತಿದ್ದಂತೆ ಕಾಲುಗಳು ಶಕ್ತಿ ಹೀನವಾಗುವುದು, ದುರ್ಬಲರಾಗುವುದು ಮೊದಲಾದ ಲಕ್ಷಣಗಳು ಇದ್ದರೆ ಅಂಥ ಸಂದರ್ಭದಲ್ಲಿ ರಕ್ತಸಂಚಾರ ಕೆಲಕಾಲ ಸ್ಥಗಿತವಾಗುತ್ತದೆ. ಮೆದುಳಿಗೂ ಸರಿಯಾಗಿ ರಕ್ತ ಪೂರೈಕೆ ಆಗದೆ ಇರಬಹುದು.
ಸಮಯಕ್ಕೆ ಸರಿಯಾಗಿ ಊಟ ಮಾಡುವುದು, ದಿನಕ್ಕೆ ನಾಲ್ಕು ಲೀಟರ್ ನಷ್ಟು ನೀರು ಕುಡಿಯುವುದರ ಮೂಲಕ ನಿಮ್ಮ ದೇಹವನ್ನು ಬಲಿಷ್ಠಗೊಳಿಸಿ. ಒಂದೇ ಸ್ಥಳದಲ್ಲಿ ಹೆಚ್ಚು ಹೊತ್ತು ಕಾಲುಗಳನ್ನು ಅಲುಗಾಡಿಸದೆ ಸ್ಥಿರವಾಗಿ ಕುಳಿತುಕೊಳ್ಳದಿರಿ.
ಹೆಚ್ಚು ಬಿಸಿಲಿಗೆ ಹೋಗುವ ಸಂದರ್ಭವಿದ್ದರೆ ಅದನ್ನು ತಪ್ಪಿಸಿ. ತಲೆನೋವಿಗೆ ಗ್ಯಾಸ್ಟ್ರಿಕ್ ಸಮಸ್ಯೆಯೂ ಕಾರಣವಿರಬಹುದು. ಹಾಗಾಗಿ ಹೆಚ್ಚು ಖಾರ ಮಸಾಲೆಯುಕ್ತ ಪದಾರ್ಥಗಳನ್ನು ಸೇವಿಸದಿರಿ. ಮಧುಮೇಹ ಹಾಗೂ ಬಿಪಿ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ಸೇವಿಸಿ. ಉಪ್ಪು ಸೇವನೆಯನ್ನು ಸಾಧ್ಯವಾದಷ್ಟು ನಿಯಂತ್ರಿಸಿ.