
ಬೆಂಗಳೂರು: ಶಿವಮೊಗ್ಗ ತಾಲೂಕಿನ ಹುಣಸೋಡು ಬಳಿ ಕಲ್ಲುಕ್ವಾರೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಮಾತ್ರವಲ್ಲ, ಬೇರೆ ಕಡೆಯೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂದು ವಿಧಾನಸಭೆಯಲ್ಲಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಸಭೆಯಲ್ಲಿ ಉತ್ತರ ನೀಡಿದ ಅವರು, 2014 -15 ರಲ್ಲಿ 4000 ಪ್ರಕರಣ ದಾಖಲಾಗಿದ್ದವು. 2015- 16ರಲ್ಲಿ 3000 ಪ್ರಕರಣ, 2016 – 17 ರಲ್ಲಿ 2000 ಪ್ರಕರಣ ದಾಖಲಾಗಿವೆ. 2018 -19 ರಲ್ಲಿ 900 ಪ್ರಕರಣ ದಾಖಲಾಗಿವೆ. 2020ರಲ್ಲಿ ಹುಣಸೋಡಿನಲ್ಲಿ ಅಕ್ರಮ ಕ್ರಷರ್ ಗಳು ಇದ್ದವು. ಆಂಧ್ರಪ್ರದೇಶದಿಂದ ಅಕ್ರಮವಾಗಿ ಸ್ಪೋಟಕ ಬರುತ್ತಿತ್ತು ಎಂದು ತಿಳಿಸಿದ್ದಾರೆ.
ಕ್ರಷರ್ ಗಳ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ರಚನೆ ಮಾಡಲಾಗುವುದು. ಅಕ್ರಮ ಗಣಿ ಎಂದು ಗೊತ್ತಿದ್ದರೂ ಕೂಡ ಪರವಾನಿಗೆ ನೀಡಲಾಗಿದೆ. ಅಂದು ಲೈಸೆನ್ಸ್ ನೀಡಿದ್ದ ಅಧಿಕಾರಿಗಳೇ ದುರಂತಕ್ಕೆ ಹೊಣೆ. ರಾಜ್ಯ ಸರ್ಕಾರದ ಕಣ್ಣುತಪ್ಪಿಸಿ ಗಣಿಗಾರಿಕೆ ನಡೆಯುತ್ತಿದೆ. ಎಷ್ಟೇ ಪ್ರಯತ್ನಪಟ್ಟರೂ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಇದರ ಪರಿಣಾಮವೇ ಮೊನ್ನೆಯ ದುರಂತವೆಂದು ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.