ಶಿವಮೊಗ್ಗ ತಾಲೂಕಿನ ಹುಣಸೋಡು ಗ್ರಾಮದ ಕಲ್ಲು ಕ್ವಾರೆಯಲ್ಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಆಘಾತಕಾರಿ ಸಂಗತಿ ಗೊತ್ತಾಗಿದೆ. ಸ್ಪೋಟದ ತೀವ್ರತೆ ಎಷ್ಟಿತ್ತು ಎಂಬುದನ್ನು ಶವಗಳ ಹುಡುಕಾಟದಲ್ಲಿ ತೊಡಗಿದ್ದ ಆಂಬುಲೆನ್ಸ್ ಚಾಲಕ ತಿಳಿಸಿದ್ದಾರೆ.
ಘಟನೆ ನಡೆದ ರಾತ್ರಿ ಸ್ಥಳಕ್ಕೆ ಹೋದ ಸಂದರ್ಭದಲ್ಲಿ ಛಿದ್ರವಾಗಿದ್ದ ಎರಡು ಮೃತದೇಹ ಕಂಡು ಬಂದಿದ್ದವು. ದೇಹದ ವಿವಿಧ ಭಾಗಗಳು ಅಲ್ಲಲ್ಲಿ ಛಿದ್ರವಾಗಿ ಬಿದ್ದಿದ್ದವು. ಸ್ಪೋಟದ ಸ್ಥಳಕ್ಕೆ ಯಾರನ್ನೂ ಬಿಟ್ಟಿರಲಿಲ್ಲ. ದೂರದಲ್ಲಿದ್ದ ಮೃತದೇಹಗಳನ್ನು ತೆಗೆದುಕೊಂಡು ಶವಾಗಾರಕ್ಕೆ ಸಾಗಿಸಲಾಗಿದೆ.
ಬೆಳಕಿನಲ್ಲಿ ಪರಿಶೀಲನೆ ನಡೆಸಿದಾಗ ಕೈ, ಕಾಲು ಸೇರಿ ದೇಹದ ಭಾಗಗಳು ಛಿದ್ರವಾಗಿ ಬಿದ್ದಿರುವುದು ಕಂಡು ಬಂದಿದ್ದು, ಅದೆಲ್ಲವನ್ನು ಚೀಲದಲ್ಲಿ ಸಂಗ್ರಹಿಸಿಕೊಂಡು ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. 5 ಶವಗಳ ಗುರುತು ಪತ್ತೆಯಾಗಿದೆ.
ಶವಗಳ ಶೋಧ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ ನೀಡಿದ ಮಾಹಿತಿಯಂತೆ ದೇಹದ ಭಾಗಗಳನ್ನು ಸಂಗ್ರಹಿಸಿ ಚೀಲದಲ್ಲಿ ಹಾಕಿಕೊಂಡು ಬಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸ್ಪೋಟದ ತೀವ್ರತೆ ಆರನೇ ಸಾವಿನಿಂದ ಬಹಿರಂಗವಾಗಿದೆ. ವಾಹನ ಬಿಡಿಭಾಗಗಳು ಚೂರಾಗಿ ಬಿದ್ದಿರುವಂತೆಯೇ ದೇಹದ ವಿವಿಧ ಭಾಗಗಳ ಚೂರುಗಳು ಘಟನಾ ಸ್ಥಳದಲ್ಲಿ ಕಂಡು ಬಂದಿವೆ ಎಂದು ಹೇಳಲಾಗಿದೆ.