
ಸಾಮಾಜಿಕ ಜಾಲತಾಣದಲ್ಲಿ ವಿಲಕ್ಷಣ ಸ್ಪರ್ಧೆಯೊಂದರ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಇದರಲ್ಲಿ ಮನುಷ್ಯರು ಕುರಿಗಳಂತೆ ವೇಷ ಧರಿಸಿ, ಮೈದಾನದಲ್ಲಿ ಕುರಿಯ ನಡವಳಿಕೆಯನ್ನು ಅನುಕರಿಸುತ್ತಾರೆ.
ಫ್ರಾನ್ಸ್ನಲ್ಲಿ ಕುರಿ- ಮಾನವ ಸ್ಪರ್ಧೆ ಎಂಬ ಸಾಲಿನೊಂದಿಗೆ ಟ್ವೀಟ್ ಮಾಡಿದ ವಿಡಿಯೋ 6 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ. 13 -ಸೆಕೆಂಡಿನ ಕ್ಲಿಪ್ನಲ್ಲಿ ಕುರಿಗಳ ವೇಷಭೂಷಣಗಳನ್ನು ಧರಿಸಿರುವ ಹಲವಾರು ವ್ಯಕ್ತಿಗಳು ಕುರಿಗಳಂತೆ ಓಡುತ್ತಿರುವುದನ್ನು ಕಾಣಬಹುದು. ಕುರಿಗಳ ನಡಿಗೆಯನ್ನು ಅನುಕರಿಸುವ ಸಲುವಾಗಿ ಅವರೆಲ್ಲರೂ ಅರ್ಧ ಬಾಗಿ ಓಡಾಡುತ್ತಿದ್ದಾರೆ. ಕ್ಯಾಮೆರಾದ ಹತ್ತಿರ ಬಂದು “ಬ್ಯಾ ಬ್ಯಾ” ಎಂದು ಕುರಿಯನ್ನು ಅನುಕರಿಸುವುದು ಸಹ ಮಜವಾಗಿದೆ. ಸ್ಥಳದಲ್ಲಿ ಇದನ್ನು ಅನೇಕರು ನೋಡಿ ಎಂಜಾಯ್ ಮಾಡುತ್ತಿದ್ದರು.

ವಿಡಿಯೊದಲ್ಲಿ ನಿಜವಾಗಿ ಏನು ನಡೆಯುತ್ತಿದೆ ಎಂಬುದು ಅಸ್ಪಷ್ಟವಾಗಿದೆ, ಇದು ಹಬ್ಬ ಅಥವಾ ಸ್ಪರ್ಧೆಯೇ ತಿಳಿಯದು. ಆದರೆ ಅದೇನೇ ಇದ್ದರೂ, ಇದು ಜನರ ಆಸಕ್ತಿಯನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಒಬ್ಬ ನೆಟ್ಟಿಗ ಇದರ ಬಗ್ಗೆ ಗಮನಸೆಳೆದು, ಇದು ಇತ್ತೀಚಿನದಲ್ಲ 2017 ರಲ್ಲಿ ಕೆನಡಾದ ನೃತ್ಯ ತಂಡದ ಚಟುವಟಿಕೆ ಎಂದು ಹೇಳಿದ್ದಾರೆ.