ಸೋನಿಪತ್: ದೆಹಲಿ –ಎನ್.ಸಿ.ಆರ್. ಪ್ರದೇಶದಲ್ಲಿ ಹೆಚ್ಚಿನ ಬೇಡಿಕೆ ಇರುವ ಹಾಟ್ ಸ್ಪಾಟ್ ಗಳಲ್ಲಿ ಒಂದಾದ ಮುರ್ತಾಲ್ ಅಪರಾಧ ಚಟುವಟಿಕೆ ಕಾರಣಕ್ಕೆ ಖ್ಯಾತವಾಗಿದೆ.
ಇಲ್ಲಿನ ಡಾಬಾಗಳಲ್ಲಿ ಮಾಂಸ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಫ್ಲೈಯಿಂಗ್ ಟೀಂ ದಾಳಿ ನಡೆಸಿದೆ. ಡಾಬಾಗಳಲ್ಲಿ ದಾಳಿ ನಡೆಸಿದ ಸಂದರ್ಭದಲ್ಲಿ ಮಾನವ ಕಳ್ಳಸಾಗಣೆಗೆ ಬಗ್ಗೆ ಮಾಹಿತಿ ದೊರೆತಿದೆ.
ಹ್ಯಾಪಿ, ರಾಜಾ ಡಾಬಾ ಮತ್ತು ಹೋಟೆಲ್ ವೆಸ್ಟ್ ಇನ್ ನಲ್ಲಿ ದಾಳಿ ಮಾಡಿದ ಸಂದರ್ಭದಲ್ಲಿ 12 ಮಂದಿ ವಯಸ್ಕರು ಅಶ್ಲೀಲವಾಗಿ ಕಂಡುಬಂದಿದ್ದರು. ಕಾರ್ಯಾಚರಣೆ ನಂತರದಲ್ಲಿ 12 ಬಾಲಕಿಯರನ್ನು ವಶಕ್ಕೆ ಪಡೆಯಲಾಗಿದೆ. ಉಜ್ಬೇಕಿಸ್ತಾನ್, ಟರ್ಕಿ ಮತ್ತು ರಷ್ಯಾಗೆ ಸೇರಿದ ತಲಾ ಒಬ್ಬರು ಹುಡುಗಿಯರಿದ್ದು, ಉಳಿದವರು ದೆಹಲಿಯವರು ಎಂದು, ಪೊಲೀಸರು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ ವಿಶೇಷ ಕಾರ್ಯಪಡೆಯ ಹೆಡ್ ಕಾನ್ಸ್ಟೇಬಲ್ ನನ್ನು ಬಂಧಿಸಲಾಗಿದೆ. ಮುರ್ತಾಲ್ ಪೊಲೀಸ್ ಠಾಣೆಯಲ್ಲಿ ಪೋಸ್ಟ್ ಮಾಡಲಾಗಿರುವ ಹೆಚ್ಚಿನ ಪೊಲೀಸ್ ಸಿಬ್ಬಂದಿಗೆ ಡಾಬಾಗಳಲ್ಲಿ ಏನು ನಡೆಯುತ್ತಿದೆ ಎನ್ನುವುದು ತಿಳಿದಿದೆ. ಮುರ್ತಾಲ್ ಠಾಣೆ ಎಸ್.ಹೆಚ್.ಒ ಅರುಣ್ ಕುಮಾರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಡಿಎಸ್ಪಿ ಕಚೇರಿಯಿಂದ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.
ವರದಿಯ ಪ್ರಕಾರ, ಸೋನಿಪತ್ ಎಸ್.ಟಿ.ಎಫ್. ಹೆಡ್ ಕಾನ್ ಸ್ಟೇಬಲ್ ದೇವೇಂದ್ರ ಡಾಬಾ ಮಾಲೀಕರು ಮತ್ತು ಮುರ್ತಾಲ್ ಪೊಲೀಸರೊಂದಿಗೆ ಸಂಪರ್ಕ ಬೆಳೆಸಿದ್ದ. ನಂತರ ಮಾಂಸ ವ್ಯಾಪಾರ ಸಂಬಂಧಿತ ಚಟುವಟಿಕೆಗಳಿಗೆ ಮಾಲೀಕರು ಪಾಸ್ ನೀಡಿದ್ದರು. ಸ್ಥಳೀಯ ಪೊಲೀಸರಿಗೆ ಕೂಡ ಮಾಹಿತಿಯಿತ್ತು ಎನ್ನುವುದು ಗೊತ್ತಾಗಿದೆ. ಮುಖ್ಯಮಂತ್ರಿಯವರ ಫ್ಲೈಯಿಂಗ್ ಟೀಂ ಹ್ಯಾಪಿ ಡಾಬಾದ ವಿವಿಧ ಸ್ಥಳಗಳಲ್ಲಿನ ಸಿಸಿಟಿವಿ ಪರಿಶೀಲಿಸಿದಾಗ ದೇವೇಂದ್ರ ಕೂಡ ಇರುವುದು ಗೊತ್ತಾಗಿದೆ.