ಬಿಹಾರ ಮಾಜಿ ಶಾಸಕ ಆನಂದ್ ಮೋಹನ್ರ ಪುತ್ರ ಹಾಗೂ ಆರ್ ಜೆ ಡಿ ಶಾಸಕ ಚೇತನ್ ಠಾಕೂರ್, ಸಮುದಾಯದ ವಿರುದ್ಧ ರಾಜ್ಯಸಭೆಯಲ್ಲಿ ತಮ್ಮ ಪಕ್ಷದ ಸಂಸದ ಮನೋಜ್ ಝಾ ಅವರ ಕವಿತೆ ಕುರಿತಂತೆ ವಾಗ್ದಾಳಿ ನಡೆಸಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಬಗ್ಗೆ ಚರ್ಚೆ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಮನೋಜ್ ಝಾ, ಠಾಕೂರ್ ಕಾ ಕುವಾನ್ ಕವನವನ್ನು ವಾಚಿಸಿದ್ದರು. ಇದು ಚೇತನ್ ಠಾಕೂರ್ರ ಆಕ್ರೋಶಕ್ಕೆ ಕಾರಣವಾಗಿದ್ದು ಠಾಕೂರ್ಗಳ ಮೇಲಿನ ಯಾವುದೇ ನಿಂದನೆ ಅಥವಾ ದಾಳಿಯನ್ನು ನಾನು ಬಲವಾಗಿ ವಿರೋಧಿಸುತ್ತೇನೆ ಎಂದು ಕಿಡಿಕಾರಿದ್ದಾರೆ.
ಠಾಕೂರ್ ಸಮಾಜವು ಎಲ್ಲಾ ವರ್ಗದ ಜನರನ್ನು ಒಳಗೊಂಡಿದೆ. ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಒಂದು ಜಾತಿಯನ್ನು ಗುರಿ ಮಾಡುವುದು ಸರಿಯಲ್ಲ. ಇಂತಹ ಹೇಳಿಕೆಗಳನ್ನು ಸಹಿಸಲು ಸಾಧ್ಯವೇ ಇಲ್ಲ ಎಂದು ಶಾಸಕ ಚೇತನ್ ಠಾಕೂರ್ ಹೇಳಿದ್ದಾರೆ.
ಮನೋಜ್ ಝಾ ರಾಜ್ಯಸಭೆಯಲ್ಲಿ ಮಹಿಳಾ ಕೋಟಾದ ಮೇಲಿನ ಚರ್ಚೆ ನಡೆಸುತ್ತಿರುವ ಸಂದರ್ಭದಲ್ಲಿ ಓಂ ಪ್ರಕಾಶ್ ವಾಲ್ಮೀಕಿ ಕವಿತೆ ಉಲ್ಲೇಖಿಸಿ ಠಾಕೂರ್ ಸಮಾಜದ ಬಗ್ಗೆ ಮಾತನಾಡಿದ್ದರು.