ಡಿಸೆಂಬರ್ ನಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು 2022 ರ ಇದೇ ಅವಧಿಯಲ್ಲಿ ಸಂಗ್ರಹಿಸಿದ ಒಟ್ಟು ತೆರಿಗೆಗೆ ಹೋಲಿಸಿದರೆ 29% ಹೆಚ್ಚಳಕ್ಕೆ ಸಾಕ್ಷಿಯಾಗಿದೆ.
ಹೌದು, ಡಿಸೆಂಬರ್ ತಿಂಗಳ ಸರಕು ಮತ್ತು ಸೇವಾ ತೆರಿಗೆಯಲ್ಲಿ ಭರ್ಜರಿ 1.64 ಲಕ್ಷ ಕೋಟಿ ರೂ. ಆದಾಯ ಸಂಗ್ರಹ ಆಗಿದೆ. ಇದು ಕಳೆದ ವರ್ಷದ ಡಿಸೆಂಬರ್ ಜಿಎಸ್ಟಿ ಸಂಗ್ರಹಕ್ಕಿಂತ ಶೇ.10ರಷ್ಟು ಹೆಚ್ಚಳವಾಗಿದೆ. ಇದರೊಂದಿಗೆ ಪ್ರಸಕ್ತ ಸಾಲಿನಲ್ಲಿ 7ನೇ ಬಾರಿಗೆ ತಿಂಗಳ ಆದಾಯದಲ್ಲಿ ಜಿಎಸ್ಟಿ ಆದಾಯ 1.6 ಲಕ್ಷ ಕೋಟಿ ರು. ದಾಟಿದೆ. 2023ರ ಏಪ್ರಿಲ್ನಲ್ಲಿ 1.87 ಲಕ್ಷ ಕೋಟಿ ರು. ಜಿಎಸ್ಟಿ ಸಂಗ್ರಹವಾಗಿ ದಾಖಲೆ ಬರೆದಿತ್ತು.
ಏಪ್ರಿಲ್-ಡಿಸೆಂಬರ್ 2023 ರ ಅವಧಿಯಲ್ಲಿ, ಒಟ್ಟು ಜಿಎಸ್ಟಿ ಸಂಗ್ರಹವು 12% ರಷ್ಟು ಬೆಳವಣಿಗೆಯನ್ನು ಕಂಡಿದ್ದು, 14.97 ಲಕ್ಷ ಕೋಟಿ ರೂ.ಗೆ ತಲುಪಿದೆ, ಹಿಂದಿನ ವರ್ಷದ ಇದೇ ಅವಧಿಯಲ್ಲಿ (ಏಪ್ರಿಲ್-ಡಿಸೆಂಬರ್ 2022) ಸಂಗ್ರಹಿಸಿದ 13.4 ಲಕ್ಷ ಕೋಟಿ ರೂ.ಆಗಿತ್ತು.