ಬೆಂಗಳೂರು : ರಾಜ್ಯ ಸರ್ಕಾರದ ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಇದುವರೆಗೆ 1.65 ಕೋಟಿ ಕುಟುಂಬಗಳು ನೋಂದಣಿ ಮಾಡಿಕೊಂಡಿದ್ದಾರೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ‘ಗೃಹಜ್ಯೋತಿ’ಯ ಲಾಭವನ್ನು ಬಹುತೇಕ ಕನ್ನಡಿಗರು ಪಡೆಯುತ್ತಿದ್ದು, ಯಶಸ್ವಿ ಯೋಜನೆಯಾಗಿ ಮನೆಮಾತಾಗಿದೆ. ಇದುವರೆಗೆ 1.65 ಕೋಟಿ ಕುಟುಂಬಗಳು ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಂಡಿವೆ. ಈ ಯೋಜನೆಯ ಲಾಭ ಪಡೆಯಲು ನೋಂದಣಿಗೆ ಯಾವುದೇ ಅಂತಿಮ ದಿನ ಇರುವುದಿಲ್ಲ. ಯಾರು ನೋಂದಣಿ ಮಾಡಿಕೊಂಡಲ್ಲವೋ ಅವರು ತಕ್ಷಣ ಸೇವಾಸಿಂಧು ಪೋರ್ಟಲ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.