ಬೆಂಗಳೂರು : ಗ್ರಾಹಕರಿಗೆ ನೆಮ್ಮದಿ ಸುದ್ದಿ ಸಿಕ್ಕಿದ್ದು, ಕೆಂಪು ಸುಂದರಿ ಟೊಮೆಟೋ ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ. ಏರಿದಷ್ಟೇ ವೇಗವಾಗಿ ಟೊಮೆಟೊ ಬೆಲೆ ದಿನೇ ದಿನೆ ಕುಸಿಯಲು ಆರಂಭಿಸಿದೆ.
10 ದಿನಗಳ ಹಿಂದಿನವರೆಗೂ ಶತಕ ದಾಟಿಯೇ ಇದ್ದ ಟೊಮೇಟೊ ದರ ನಾಲ್ಕೈದು ದಿನಗಳಿಂದ ಕೆಜಿಗೆ 90 ರೂ., 70 ರೂ., 60 ರೂ. ಹೀಗೆ ಕಡಿಮೆಯಾಗುತ್ತ ಬಂದಿದ್ದು, ಶನಿವಾರದ ಭಾರೀ ಕುಸಿತ ಕಂಡಿದೆ. ಹಲವು ಕಡೆ 50-60 ರೂ ಮಾರಾಟವಾಗುತ್ತಿದೆ. ಮಳೆ ಕಡಿಮೆಯಾಗಿ ಬಿಸಿಲು ಬೀಳುತ್ತಿರುವುದರಿಂದ ಸ್ಥಳೀಯವಾಗಿ ಬೆಳೆದ ಟೊಮೇಟೊ ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರುತ್ತಿದೆ. ಈ ಹಿನ್ನೆಲೆ ಡಿಮ್ಯಾಂಡ್ ಕಡಿಮೆಯಾಗಿದೆ ಎಂದು ಹೇಳಲಾಗಿದೆ.
ಮೊದಲು ಚಿಲ್ಲರೆ ವ್ಯಾಪಾರದಲ್ಲಿ ಟೊಮೆಟೊ ದರ ಕೆಜಿಗೆ 80 ರಿಂದ 120 ರೂಪಾಯಿಗೆ ಏರಿಕೆಯಾಗಿತ್ತು, ಕೆಲವು ದಾಖಲೆ ಬೆಲೆ 200 ರೂಗೂ ಮಾರಾಟವಾಗಿತ್ತು. ಏರಿದಷ್ಟೇ ವೇಗವಾಗಿ ಟೊಮೆಟೊ ಬೆಲೆ ದಿನೇ ದಿನೆ ಕುಸಿಯಲು ಆರಂಭಿಸಿದೆ.