ಕಾರುಗಳ ಮಾರಾಟವನ್ನು ಹೆಚ್ಚಿಸುವುದರ ಜೊತೆಗೆ 2023ರ ಸ್ಟಾಕ್ ಅನ್ನು ಸಂಪೂರ್ಣ ಖಾಲಿ ಮಾಡುವ ನಿಟ್ಟಿನಲ್ಲಿ ಅನೇಕ ಕಂಪನಿಗಳು ಗ್ರಾಹಕರಿಗೆ ಭರ್ಜರಿ ರಿಯಾಯಿತಿ ನೀಡುತ್ತಿವೆ, ಕೆಲವು SUVಗಳ ಖರೀದಿ ಮೇಲೆ ಕೂಡ ಡಿಸ್ಕೌಂಟ್ ದೊರೆಯುತ್ತಿದೆ. ಪ್ರಮುಖವಾಗಿ ಮಹೀಂದ್ರಾ ಕಂಪನಿ, XUV300 ಮತ್ತು XUV400 ಮೇಲೆ ಭಾರೀ ರಿಯಾಯಿತಿಗಳನ್ನು ನೀಡುತ್ತಿದೆ.
ಮಾರುತಿ ನೆಕ್ಸಾ ಮತ್ತು ಅರೇನಾ ಕಾರುಗಳ ಮೇಲೆ 1.50 ಲಕ್ಷದವರೆಗೆ ರಿಯಾಯಿತಿ ಸಿಗಲಿದೆ. ಹಾಗಾಗಿ ಈ ತಿಂಗಳಿನಲ್ಲಿ ಕಾರು ಖರೀದಿ ಮಾಡುವವರು ಸಾಕಷ್ಟು ಉಳಿತಾಯ ಮಾಡಬಹುದು. ಕಾರು ಬುಕ್ಕಿಂಗ್ ಮಾಡುವ ಮೊದಲು ಬೆಸ್ಟ್ ಆಫರ್ ಯಾವುದು ಎಂಬುದನ್ನು ತಿಳಿದುಕೊಳ್ಳಿ.
ಕಾರುಗಳ ಮೇಲೆ ಡಿಸ್ಕೌಂಟ್
– ಮಹೀಂದ್ರಾ ಬೊಲೆರೊ ಖರೀದಿ ಮೇಲೆ 1 ಲಕ್ಷದವರೆಗೆ ಬೆನಿಫಿಟ್ಸ್
– ಹ್ಯುಂಡೈ ವೆರ್ನಾದಲ್ಲಿ 55,000 ರೂಪಾಯಿವರೆಗಿನ ರಿಯಾಯಿತಿ.
-ಹ್ಯುಂಡೈ ಅಲ್ಕಾಜರ್ ಕಾರಿನ ಮೇಲೆ 45,000 ರೂಪಾಯಿವರೆಗೂ ಡಿಸ್ಕೌಂಟ್.
– ಮಹೀಂದ್ರಾ XUV300 ಖರೀದಿಸುವವರಿಗೆ 1.82 ಲಕ್ಷದವರೆಗೆ ಲಾಭದ ಕೊಡುಗೆಗಳು.
– ಮಹೀಂದ್ರಾ XUV400 ಮೇಲೆ 4.2 ಲಕ್ಷದವರೆಗೆ ಲಾಭದ ಕೊಡುಗೆಳು.
– ಮಾರುತಿ ಗ್ರ್ಯಾಂಡ್ ವಿಟಾರಾ ಖರೀದಿ ಮೇಲೆ 75,000 ರೂಪಾಯಿವರೆಗಿನ ಬೆನಿಫಿಟ್ಸ್.
– ಮಾರುತಿ ಜಿಮ್ನಿ ಮೇಲೆ 1.50 ಲಕ್ಷದವರೆಗೂ ರಿಯಾಯಿತಿ.
– ಮಾರುತಿ ಫ್ರಾಂಕ್ಸ್ ಕಾರು ಕೊಳ್ಳುವವರಿಗೆ 83,000 ರೂಪಾಯಿವರೆಗೂ ಕಡಿತ.
-ಮಾರುತಿ ಆಲ್ಟೊ ಕೆ10 ಮೇಲೆ 62,000 ರೂಪಾಯಿವರೆಗೆ ಲಾಭದ ಕೊಡುಗೆಗಳಿವೆ.
– S-Presso ಮತ್ತು ವ್ಯಾಗನಾರ್ ಮೇಲೆ 61,000 ರೂಪಾಯಿವರೆಗೂ ಆಫರ್.
– ಹೋಂಡಾ ಸಿಟಿ ಕಾರಿನ ಮೇಲೆ 1.11 ಲಕ್ಷದವರೆಗೆ ಲಾಭದ ಕೊಡುಗೆಗಳಿವೆ.
– ಹೋಂಡಾ ಅಮೇಜ್ ಖರೀದಿಸುವವರಿಗೆ 92,000 ರೂಪಾಯಿಯಷ್ಟು ಆಫರ್ಸ್
ಅಷ್ಟೇ ಅಲ್ಲ ಹ್ಯುಂಡೈ ತನ್ನ ಹಲವು ಕಾರುಗಳ ಮೇಲೆ ರಿಯಾಯಿತಿಯನ್ನೂ ನೀಡುತ್ತಿದೆ. 2023 ವೆರ್ನಾ ಸೆಡಾನ್ ಮೇಲೆ 55,000 ರೂಪಾಯಿವರೆಗೆ ನಗದು ರಿಯಾಯಿತಿ ಮತ್ತು ಟಕ್ಸನ್ SUV ಮೇಲೆ 2 ಲಕ್ಷದವರೆಗೆ ನಗದು ರಿಯಾಯಿತಿ ಲಭ್ಯವಿದೆ. ಅದೇ ರೀತಿ ಗ್ರಾಂಡ್ ಐ10 ನಿಯೋಸ್, ಅಲ್ಕಾಜರ್, ಔರಾ, ವೆನ್ಯೂ ಮತ್ತು ಐ20 ಗಳಿಗೆ ಕ್ರಮವಾಗಿ ರೂ.48,000, ರೂ.45,000, ರೂ.33,000, ರೂ.30,000 ಮತ್ತು ರೂ.30,000 ವರೆಗೆ ರಿಯಾಯಿತಿ ನೀಡಲಾಗುತ್ತಿದೆ.