ಟಾಟಾ ಮೋಟಾರ್ಸ್ ಮೇ ತಿಂಗಳಲ್ಲಿ ತನ್ನ ವಾಹನಗಳ ಮೇಲೆ ಬಂಪರ್ ರಿಯಾಯಿತಿಗಳನ್ನು ನೀಡುತ್ತಿದೆ. ಕೆಲವು ಟಾಟಾ ವಾಹನಗಳನ್ನು ಖರೀದಿಸಿದ್ರೆ 60,000 ರೂಪಾಯಿವರೆಗೆ ಉಳಿತಾಯ ಮಾಡಬಹುದು. ಹೊಸ ಕಾರನ್ನು ಖರೀದಿಸಲು ಬಯಸುವವರಿಗೆ ಇದು ಉತ್ತಮ ಅವಕಾಶ.
ಟಾಟಾ ಟಿಯಾಗೊ
ಟಾಟಾದ ಜನಪ್ರಿಯ ಹ್ಯಾಚ್‌ಬ್ಯಾಕ್ ಟಿಯಾಗೊ ಪೆಟ್ರೋಲ್ ರೂಪಾಂತರಗಳಾದ XT(O), XT ಮತ್ತು XZ ಗಳ ಮೇಲೆ 60,000 ರೂಪಾಯಿವರೆಗೂ ರಿಯಾಯಿತಿ ನೀಡಲಾಗುತ್ತಿದೆ. ಈ ವಾಹನಗಳ ಮೇಲೆ 45,000 ರೂಪಾಯಿಗಳ ನಗದು ರಿಯಾಯಿತಿ, 10,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್ ಮತ್ತು 5,000 ರೂಪಾಯಿಗಳ ಕಾರ್ಪೊರೇಟ್ ಪ್ರಯೋಜನಗಳು ಲಭ್ಯವಿದೆ.
Tiagoದ ಉಳಿದ ಪೆಟ್ರೋಲ್ ಮಾದರಿಗಳ ಮೇಲೆ 35,000 ರೂಪಾಯಿಗಳ ನಗದು ರಿಯಾಯಿತಿ ಲಭ್ಯವಿದೆ. Tiago CNG ಮೇಲೆ 25,000 ರೂಪಾಯಿಗಳ ನಗದು ರಿಯಾಯಿತಿ ಲಭ್ಯವಿದೆ. ಎಲ್ಲಾ ಮಾದರಿಗಳಲ್ಲಿ ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ಪ್ರಯೋಜನಗಳನ್ನು ಸಹ ಪಡೆಯಬಹುದು.
ಟಾಟಾ ಆಲ್ಟ್ರೋಜ್
Tata Altrozನ ಡೀಸೆಲ್ ಮತ್ತು ಪೆಟ್ರೋಲ್ ಮ್ಯಾನ್ಯುವಲ್ ಟ್ರಾನ್ಸ್‌ಮಿಷನ್ (MT) ವಾಹನಗಳ ಮೇಲೆ 50,000 ರೂಪಾಯಿವರೆಗೆ ರಿಯಾಯಿತಿ ಲಭ್ಯವಿದೆ. ಇದರಲ್ಲಿ 35,000 ನಗದು ರಿಯಾಯಿತಿ, 10,000 ವಿನಿಮಯ ಬೋನಸ್ ಮತ್ತು 5,000 ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ. Altroz CNG ಮಾದರಿ ಕೊಂಡುಕೊಂಡರೆ 35,000 ರೂಪಾಯಿವರೆಗೆ ಡಿಸ್ಕೌಂಟ್ ದೊರೆಯುತ್ತದೆ. 20,000 ನಗದು ರಿಯಾಯಿತಿ, ವಿನಿಮಯ ಬೋನಸ್ ಮತ್ತು ಕಾರ್ಪೊರೇಟ್ ರಿಯಾಯಿತಿಗಳು ಸೇರಿವೆ.
ಟಾಟಾ Tigor
ಟಾಟಾ Tigor ಮೇಲೆ ಕಂಪನಿ 55,000 ರೂ.ವರೆಗೆ ರಿಯಾಯಿತಿ ನೀಡುತ್ತಿದೆ. Tigor ನ XZ+ ಮತ್ತು XM ಮಾಡೆಲ್‌ಗಳ ಮೇಲೆ 40,000 ನಗದು ರಿಯಾಯಿತಿ, 10,000 ಎಕ್ಸ್‌ಚೇಂಜ್ ಬೋನಸ್ ಮತ್ತು 5,000 ರೂಪಾಯಿ ಕಾರ್ಪೊರೇಟ್ ಪ್ರಯೋಜನವನ್ನು ಇದು ಒಳಗೊಂಡಿದೆ. ಉಳಿದ ವೇರಿಯಂಟ್‌ಗಳ ಮೇಲೆ 30,000 ರೂ.ವರೆಗೆ ರಿಯಾಯಿತಿ ಇದೆ. Tigor CNG ರೂಪಾಂತರವು 30,000 ರೂಪಾಯಿಗಳ ನಗದು ರಿಯಾಯಿತಿ ಮತ್ತು 10,000 ರೂಪಾಯಿಗಳ ವಿನಿಮಯ ಬೋನಸ್ ಅನ್ನು ಪಡೆಯುತ್ತಿದೆ.
ಟಾಟಾ ನೆಕ್ಸನ್
Nexon SUVಯ ಡೀಸೆಲ್ ಮಾದರಿಯ ಮೇಲೆ 20,000 ರೂಪಾಯಿ ರಿಯಾಯಿತಿ ಲಭ್ಯವಿದೆ. 15,000 ನಗದು ರಿಯಾಯಿತಿ ಮತ್ತು 5,000 ಕಾರ್ಪೊರೇಟ್ ರಿಯಾಯಿತಿಯನ್ನು ಒಳಗೊಂಡಿದೆ. ಪೆಟ್ರೋಲ್ ರೂಪಾಂತರಗಳಿಗೆ 10,000 ನಗದು ರಿಯಾಯಿತಿ ಮತ್ತು 5,000 ಕಾರ್ಪೊರೇಟ್ ರಿಯಾಯಿತಿ ಲಭ್ಯವಿದೆ. ಈ ವಾಹನದಲ್ಲಿ ಯಾವುದೇ ವಿನಿಮಯ ಬೋನಸ್ ಇರುವುದಿಲ್ಲ.
ಟಾಟಾ ಪಂಚ್‌ನಲ್ಲಿ ಕೇವಲ 3,000 ರೂಪಾಯಿಗಳ ಕಾರ್ಪೊರೇಟ್ ರಿಯಾಯಿತಿ ಇದೆ. ಕೆಲವು ಡೀಲರ್‌ಶಿಪ್‌ಗಳು ಹ್ಯಾರಿಯರ್ ಮತ್ತು ಸಫಾರಿ ಎಸ್‌ಯುವಿಗಳಲ್ಲಿ 75,000 ರೂಪಾಯಿಗಳವರೆಗೆ ನಗದು ರಿಯಾಯಿತಿ ಮತ್ತು 50,000 ರೂಪಾಯಿಗಳ ಎಕ್ಸ್‌ಚೇಂಜ್ ಬೋನಸ್‌ಗಳನ್ನು ನೀಡುತ್ತಿವೆ. ಆದಾಗ್ಯೂ, ಈ ರಿಯಾಯಿತಿಯು ವಾಹನದ ಮಾದರಿ, ಬಣ್ಣ ಇತ್ಯಾದಿಗಳನ್ನು ಅವಲಂಬಿಸಿರುತ್ತದೆ.