ಈ ತಿಂಗಳಾಂತ್ಯಕ್ಕೆ ಆರ್ಥಿಕ ವರ್ಷವು ಕೊನೆಗೊಳ್ಳಲಿದೆ. ಹೊಸ ಹಣಕಾಸು ವರ್ಷ ಏಪ್ರಿಲ್ನಿಂದ ಆರಂಭವಾಗಲಿದೆ. ಹೊಸ ಹಣಕಾಸು ವರ್ಷದಲ್ಲಿ ಅನೇಕ ಕಾರು ಕಂಪನಿಗಳು ವಾಹನಗಳ ಬೆಲೆ ಏರಿಕೆ ಮಾಡಲು ಸಜ್ಜಾಗಿವೆ. ಹಾಗಾಗಿ ಪ್ರಸ್ತುತ ಮಾರ್ಚ್ ತಿಂಗಳಿನಲ್ಲಿ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ ಸಿಗುತ್ತಿದೆ.
ಅದರಲ್ಲೂ ಪ್ರಮುಖವಾಗಿ ಮಾರುತಿ ಸುಜುಕಿ ಕಂಪನಿ ಕಾರುಗಳ ಮೇಲೆ ಡಿಸ್ಕೌಂಟ್ ಪ್ರಕಟಿಸಿದೆ. ಅರೆನಾ ಡೀಲರ್ಶಿಪ್ ಅಡಿಯಲ್ಲಿ ಮಾರಾಟವಾಗುವ ಕೆಲವು ಮಾರುತಿ ಕಾರುಗಳು ಮೇಲೆ 67, 000 ರೂಪಾಯಿವರೆಗೆ ರಿಯಾಯಿತಿ ನೀಡಲಾಗ್ತಿದೆ. ಆಲ್ಟೊ, ವ್ಯಾಗನ್ಆರ್ ಸೆಲೆರಿಯೊ ಮತ್ತು ಎಸ್-ಪ್ರೆಸ್ಸೊ ಕಾರುಗಳ ಖರೀದಿ ಮೇಲೆ ಡಿಸ್ಕೌಂಟ್ ಲಭ್ಯವಿದೆ.
ಆಟೋ K10 ಮೇಲೆ 67, 000 ರೂ., ಎಸ್-ಪ್ರೆಸ್ಸೊ ಮೇಲೆ 66000 ರೂ., ವ್ಯಾಗನ್ ಆರ್ ಖರೀದಿ ಮೇಲೆ 66, 000 ರೂ. ಮತ್ತು ಸೆಲೆರಿಯೊ ಕಾರಿಗೆ 61,000 ರೂಪಾಯಿ ಉಳಿತಾಯ ಮಾಡಲು ಗ್ರಾಹಕರಿಗೆ ಅವಕಾಶವಿದೆ. ಈ ಕೊಡುಗೆಗಳು ಮಾರ್ಚ್ ತಿಂಗಳಿಗೆ ಮಾತ್ರ ಮಾನ್ಯವಾಗಿರುತ್ತವೆ.
ನಗದು ರಿಯಾಯಿತಿಯ ಜೊತೆಗೆ ಕಾರ್ಪೊರೇಟ್ ರಿಯಾಯಿತಿ ಅಥವಾ ವಿನಿಮಯ ಬೋನಸ್ ಮುಂತಾದ ಬೆನಿಫಿಟ್ಗಳು ಲಭ್ಯವಿವೆ. ಇದರ ಹೊರತಾಗಿ ಡೀಲರ್ಶಿಪ್ ಮತ್ತು ನಗರವನ್ನು ಅವಲಂಬಿಸಿ ರಿಯಾಯಿತಿ ಕೊಡುಗೆಗಳು ಬದಲಾಗಬಹುದು. ಆದ್ದರಿಂದ ಕಾರನ್ನು ಖರೀದಿಸುವ ಮೊದಲು ಅವನ್ನೆಲ್ಲ ಪರಿಶೀಲಿಸಿಕೊಳ್ಳಿ.
ಮಾರುತಿ ಸುಜುಕಿ ವ್ಯಾಗನ್ ಆರ್ ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿದೆ. ಆಲ್ಟೊ ಮಾರಾಟವೂ ಉತ್ತಮವಾಗಿದೆ. ಆದರೆ ಎಸ್-ಪ್ರೆಸ್ಸೊ ಮತ್ತು ಸೆಲೆರಿಯೊ ಮಾರಾಟವು ತುಂಬಾ ಕಡಿಮೆಯಾಗಿದೆ. ಇದು ಟಾಪ್-20 ಕಾರುಗಳ ಪಟ್ಟಿಯಲ್ಲಿಲ್ಲ.
ವ್ಯಾಗನ್ ಆರ್ ಬೆಲೆ 5.54 ಲಕ್ಷದಿಂದ 7.38 ಲಕ್ಷ ರೂಪಾಯಿವರೆಗಿದೆ. ಸೆಲೆರಿಯೊ ಬೆಲೆ 5.37 ಲಕ್ಷದಿಂದ 7.09 ಲಕ್ಷ, ಎಸ್-ಪ್ರೆಸ್ಸೋ ದರ 4.26 ಲಕ್ಷದಿಂದ 6.12 ಲಕ್ಷ ಮತ್ತು ಆಲ್ಟೊ ಕೆ10 ಬೆಲೆ 3.99 ಲಕ್ಷದಿಂದ 5.96 ಲಕ್ಷ ರೂಪಾಯಿ ಇದೆ.