ಕುಲ್ಲು : ಹಿಮಾಚಲ ಪ್ರದೇಶದ ಕುಲ್ಲುವಿನಲ್ಲಿ ಗುರುವಾರ ಬೆಳಿಗ್ಗೆ ಪಾರ್ವತಿ ನದಿಯ ಭೀಕರ ಪ್ರವಾಹಕ್ಕೆ ಕಟ್ಟಡವೊಂದು ಕುಸಿದು ಕೊಚ್ಚಿ ಹೋಗಿದೆ.
ನೋಡ ನೋಡುತ್ತಿದ್ದಂತೆ ಬೃಹತ್ ಕಟ್ಟಡ ಕುಸಿದು ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದು, ಎದೆ ಝಲ್ ಎನಿಸುವ ವಿಡಿಯೋ ವೈರಲ್ ಆಗಿದೆ. ಭಾರೀ ಮಳೆಯಿಂದಾಗಿ ಪಾರ್ವತಿ ನದಿ ಉಕ್ಕಿ ಹರಿದಿದ್ದು ಮತ್ತು ಅದರ ಹರಿವಿನ ಪ್ರಮಾಣವನ್ನು ಹೆಚ್ಚಿಸಿತು.
ಬುಧವಾರ ಮತ್ತು ಗುರುವಾರ. ಆಗಸ್ಟ್ 2 ಮತ್ತು 3 ರಂದು ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಬಗ್ಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಆಗಸ್ಟ್ 5 ರವರೆಗೆ ರಾಜ್ಯದಲ್ಲಿ ತೇವಾಂಶದ ಮುನ್ಸೂಚನೆಗಳಿವೆ. ಮಾನ್ಸೂನ್ ಚಟುವಟಿಕೆ ತೀವ್ರಗೊಳ್ಳುವ ನಿರೀಕ್ಷೆಯಿದೆ, ಮುಂದಿನ ನಾಲ್ಕರಿಂದ ಐದು ದಿನಗಳಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ದಿನಗಳಲ್ಲಿ ಉನಾ, ಬಿಲಾಸ್ಪುರ, ಹಮೀರ್ಪುರ್, ಕಾಂಗ್ರಾ, ಮಂಡಿ, ಶಿಮ್ಲಾ ಮತ್ತು ಸಿರ್ಮೌರ್ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ.