ಯೋಗರಾಜ್ ಭಟ್ ನಿರ್ದೇಶನದ ಸುಮುಖ್ ಅಭಿನಯದ ʼಮನದ ಕಡಲುʼ ಚಿತ್ರದ ಮೊದಲ ಹಾಡು ಇಂದು ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಸಂಜಿತ್ ಹೆಗಡೆ ಧ್ವನಿಯಲ್ಲಿ ಮೂಡಿ ಬಂದಿರುವ ಈ ಹಾಡಿಗೆ ವಿ. ಹರಿಕೃಷ್ಣ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಹಾಗೂ ಯೋಗರಾಜ್ ಭಟ್ ಅವರ ಸಾಹಿತ್ಯ ಇದೆ.
‘ಮುಂಗಾರು ಮಳೆ’ ತೆರೆ ಮೇಲೆ ಬಂದು ಇಂದಿಗೆ 18 ವರ್ಷಗಳಾಗಿದ್ದು, ಇದನ್ನು ಸೆಲೆಬ್ರೇಟ್ ಮಾಡಲು ಈ ಹಾಡನ್ನು ರಿಲೀಸ್ ಮಾಡಿರುವುದಾಗಿ ನಿರ್ದೇಶಕ ಯೋಗರಾಜ್ ಭಟ್ ತಿಳಿಸಿದ್ದಾರೆ.
ಈ ಚಿತ್ರವನ್ನುಇಕೆ ಎಂಟರ್ಟೈನರ್ಸ್ ಬ್ಯಾನರ್ ನಲ್ಲಿ ಇ. ಕೃಷ್ಣಪ್ಪ ನಿರ್ಮಾಣ ಮಾಡಿದ್ದು, ಸುಮುಖ್ ಹಾಗೂ ರಶಿಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕೆ.ಎಂ. ಪ್ರಕಾಶ್ ಸಂಕಲನ, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ವಿ. ಮುರಳಿ ನೃತ್ಯ ನಿರ್ದೇಶನವಿದೆ.