ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುವಕ ಆಕಾಶ್ ಮಠಪತಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
30 ವರ್ಷದ ಆಕಾಶ್ ಮಠಪತಿ, ಆಟೋ ಚಾಲಕ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಗನಾಗಿದ್ದು, ಜೂನ್ 22ರಂದು ಶನಿವಾರ ರಾತ್ರಿ ಆಕಾಶ್ ನನ್ನು ಲೋಹಿಯಾನಗರದ ಪವನ್ ಸ್ಕೂಲ್ ಹಿಂಭಾಗದಲ್ಲಿ ಹತ್ಯೆಗೈಯ್ಯಲಾಗಿತ್ತು.
ಆಕಾಶ್ ಹಾಗೂ ಪತ್ನಿ ಕಾವ್ಯಾ ಪ್ರೀತಿಸಿ ವಿವಾಹವಾಗಿದ್ದರು. ದಂಪತಿ ಉತ್ತರ ಕನ್ನಡದ ಗೋರ್ಣದ ಬಳಿ ವಾಸವಾಗಿದ್ದರು. ಆಕಾಶ್ ಕೊಲೆಗೆ ಪತ್ನಿ ಕಾವ್ಯಾ, ಅತ್ತೆ ಶ್ರೀದೇವಿ, ಮಾವ ಮೋಹನ್ ನಾಯಕ್ ಅವರ ಕುಮ್ಮಕ್ಕು ಕಾರಣ ಎಂದು ಆರೋಪಿಸಿ ಆಕಾಶ್ ತಂದೆ ಶೇಖರಯ್ಯ, ಹಳೇ ಬುಹ್ಹಳ್ಳಿ ಠಾಣೆಯಲ್ಲಿ 12 ಜನರ ವಿರುದ್ಧ ದೂರು ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ 12 ಜನರಲ್ಲಿ ಸದ್ಯ 8 ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.