
ಹುಬ್ಬಳ್ಳಿ: ಎರಡು ಕುಟುಂಬಗಳ ಗಲಾಟೆಯ ವೇಳೆ ಚಾಕುವಿನಿಂದ ಇರಿದ ಘಟನೆ ಹುಬ್ಬಳ್ಳಿಯ ಇಂದಿರಾ ನಗರದಲ್ಲಿ ನಡೆದಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಆರೋಪಿಗಳು ವ್ಯಕ್ತಿಗೆ ಚಾಕುವಿನಿಂದ ಇರಿದಿದ್ದಾರೆ. ಯಶವಂತ್ ಎಂಬುವರ ಹೊಟ್ಟೆಗೆ ಮಾರುತಿ ಎಂಬಾತ ಚಾಕುವಿನಿಂದ ಇರಿದ ಆರೋಪ ಕೇಳಿ ಬಂದಿದೆ. ಭೋಜರಾಜ್, ಸೂರ್ಯನಾರಾಯಣ ಸೇರಿ ನಾಲ್ವರು ಕೃತ್ಯವೆಸಗಿದ್ದಾರೆ ಎನ್ನಲಾಗಿದೆ.
ನನ್ನ ಮೇಲೆಯೂ ಹಲ್ಲೆ ಮಾಡಿದ್ದಾರೆ ಎಂದು ಮಾರುತಿ ಆರೋಪಿಸಿದ್ದಾರೆ. ಶಾಲೆಯಿಂದ ಮಗು ಕರೆದುಕೊಂಡು ಬರುವಾಗ ಹಲ್ಲೆ ಮಾಡಲಾಗಿದೆ. ಅವರು ದಾಳಿ ಮಾಡೋಕೆ ಬಂದಾಗ ನಾವು ಮಾಡಿದ್ದೇವೆ ತಿಳಿಸಿದ್ದಾರೆ. ಎರಡೂ ಕುಟುಂಬದವರ ಗಲಾಟೆಯ ವೇಳೆ ಯಶವಂತ್ ಗೆ ಚಾಕುವಿನಿಂದ ಇರಿಯಲಾಗಿದ್ದು, ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಸಬಾ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.