
ಹುಬ್ಬಳ್ಳಿ: 18 ವರ್ಷದ ಯುವತಿಯನ್ನು ಮದುವೆಯಾಗಿದ್ದ 50 ವರ್ಷದ ಸೆಕ್ಯೂರಿಟಿಯನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಪ್ರಕಾಶ್ (50) ಬಂಧಿತ ಆರೋಪಿ. ಕರಿಷ್ಮಾ ಎಂಬ 18 ವರ್ಷದ ಯುವತಿಯನ್ನು ಪ್ರಕಾಶ್ ವಿವಾಹವಾಗಿದ್ದ. ಇದ್ದಕ್ಕಿದ್ದಂತೆ ಕರಿಷ್ಮಾ ಆತನನ್ನು ಬಿಟ್ಟು ಬಂದು ಮನೆ ಸೇರಿದ್ದಳು. ಅಲ್ಲದೇ ಪ್ರಕಾಶ್ ತನ್ನನ್ನು ಬಲವಂತದಿಂದ ಕರೆದೊಯ್ದು ಮದುವೆಯಾಗಿದ್ದಾಗಿ ದೂರು ನೀಡಿದ್ದಳು.
ಹುಬ್ಬಳ್ಳಿಯ ಕೇಶ್ವಾಪುರ ಠಾಣೆಯಲ್ಲಿ ಪ್ರಕಾಶ್ ವಿರುದ್ಧ ದೂರು ದಾಖಲಾಗಿತ್ತು. ಕಳೆದ ಒಂದು ವರ್ಷದಿಂದ ಪ್ರಕಾಶ್ ತನಗೆ ಕಿರುಕುಳ ನೀಡುತ್ತಿದ್ದ. ಬಲವಂತದಿಂದ ಕರೆದೊಯ್ದು ಮದುವೆಯಾಗಿದ್ದಾನೆ ಎಂದು ದೂರು ದಾಖಲಿಸಿದ್ದಾಳೆ. ಈ ಹಿನ್ನೆಲೆಯಲ್ಲಿ ಆರೋಪಿ ಪ್ರಕಾಶ್ ನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.