ಬೆಂಗಳೂರು: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 43 ಕೇಸ್ ವಪಾಸ್ ಪಡೆಯಲಾಗುತ್ತದೆ. ನಿಯಮಾನುಸಾರವೇ ಕೇಸ್ ವಾಪಾಸ್ ಪಡೆಯಲು ನಿರ್ಧರಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಕಣ್ಮುಚ್ಚಿಕೊಂಡು ಕೇಸ್ ವಾಪಾಸ್ ಪಡೆಯುತ್ತಿಲ್ಲ. ನಿಯಮಾನುಸಾರವಾಗಿಯೇ ಕೇಸ್ ವಾಪಾಸ್ ಪಡೆಯುತ್ತಿದ್ದೇವೆ ಎಂದರು.
ಸುಳ್ಳು ಕೇಸ್ ಗಳನ್ನು ಹಾಕಿದ್ದರೆ ಪರಿಶೀಲಿಸಿ ಅದನ್ನು ವಾಪಾಸ್ ಪಡೆಯಲು ಸರ್ಕರಕ್ಕೆ ಅವಕಾಶವಿದೆ. ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ 43 ಕೇಸ್ ವಾಪಾಸ್ ಪಡೆಯುತ್ತೇವೆ. ಇದರಲ್ಲಿ ಕೇವಲ ಅಲ್ಪಸಂಖ್ಯಾತರಷ್ಟೇ ಅಲ್ಲ. ವಿದ್ಯಾರ್ಥಿಗಳು, ರೈತರು ಇದ್ದಾರೆ. ಡಿಜೆಹಳ್ಳಿ, ಕೆಜಿ ಹಳ್ಳಿ ಕೇಸ್ ಗಳನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.