
ಹುಬ್ಬಳ್ಳಿ: ಟೇಬಲ್ ಮೇಲಿದ್ದ ಮೊಬೈಲ್ ಏಕಾಏಕಿ ಸ್ಪೋಟಗೊಂಡ ಘಟನೆ ಹುಬ್ಬಳ್ಳಿಯ ಮದಿರಾ ಕಾಲೋನಿಯಲ್ಲಿ ನಡೆದಿದೆ.
ಚಾರ್ಜಿಂಗ್ ಗೆ ಇಡದಿದ್ದರೂ ಮೊಬೈಲ್ ಸ್ಫೋಟಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಉಂಟಾಗಿಲ್ಲ. ದಯಾನಂದ ಕೋಟ್ಯಾನ್ ಎಂಬುವರು ಎರಡು ವರ್ಷದ ಹಿಂದೆ ಜಿಯೋನಿ ಮೊಬೈಲ್ ಖರೀದಿಸಿದ್ದು, ಶುಕ್ರವಾರ ಅವರ ಪುತ್ರಿ ಮೊಬೈಲ್ ನಲ್ಲಿ ಮಾತನಾಡಿದ ನಂತರ, ಟೇಬಲ್ ಮೇಲೆ ಫೋನ್ ಇಟ್ಟಿದ್ದಾರೆ. ಈ ವೇಳೆ ಏಕಾಏಕಿ ಮೊಬೈಲ್ ಸ್ಪೋಟಗೊಂಡಿದ್ದು, ಸ್ಪೋಟದ ತೀವ್ರತೆಗೆ ಮೊಬೈಲ್ ಬ್ಯಾಟರಿ ಸುಟ್ಟು ಕರಕಲಾಗಿದೆ. ಮನೆಯವರೆಲ್ಲ ಆತಂಕಕ್ಕೆ ಒಳಗಾಗಿದ್ದರು ಎಂದು ಹೇಳಲಾಗಿದೆ.