
ಹುಬ್ಬಳ್ಳಿ: ಲಾಡ್ಜ್ ನಲ್ಲಿ ಖೋಟಾ ನೋಟು ಚಲಾವಣೆ ಮಾಡುತ್ತಿದ್ದವರು ಲಾಕ್ ಆಗಿದ್ದಾರೆ. ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಗುರುರಾಜ, ಕಲ್ಲಯ್ಯ ಪಟ್ಟದಮಠ, ಶಿವಾನಂದ ಕಾರಜೋಳ, ಪತ್ರಕರ್ತ ದತ್ತಾತ್ರೇಯ ಕುಂಬಾರ್ ಬಂಧಿತ ಆರೋಪಿಗಳು ಎಂದು ಹೇಳಲಾಗಿದೆ. ಬಂಧಿತರಿಂದ 200 ರೂಪಾಯಿ ಮುಖಬೆಲೆಯ 129 ಖೋಟಾ ನೋಟುಗಳು, 100 ರೂಪಾಯಿ ಮುಖಬೆಲೆಯ 77 ನೋಟುಗಳು, ಒಂದು ಯುಎಸ್ ಡಾಲರ್, ಒಂದು ಪ್ರಿಂಟರ್, 4 ಬಣ್ಣದ ಡಬ್ಬಿಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆಸಲಾಗಿದೆ.